See also 1entrain  3entrain
2entrain ಇ(ಎ)ನ್‍ಟ್ರೇನ್‍
ಸಕರ್ಮಕ ಕ್ರಿಯಾಪದ
  1. ಎಳೆದುಕೊಂಡು ಹೋಗು.
  2. (ದ್ರವದ ವಿಷಯದಲ್ಲಿ) (ಕಣಗಳು ಮೊದಲಾದವನ್ನು) ಕೊಂಡೊಯ್ಯು; ಸಾಗಿಸು; ಎಳೆದುಕೊಂಡು ಹೋಗು; ತನ್ನ ಪ್ರವಾಹದ ಮೂಲಕ ಎಳೆದು ಕೊಂಡು ಹೋಗು; ಸೆಳೆದುಕೊಂಡು ಹರಿ; ಹರಿಯುತ್ತ ಸಾಗಿಸು, ಒಯ್ಯು.
  3. (ದ್ರವದ ವಿಷಯದಲ್ಲಿ) ಕ್ಷೋಭೆಯಿಂದ ಯಾಂತ್ರಿಕವಾಗಿ ಯಾ ರಾಸಾಯನಿಕ ಕ್ರಿಯೆಯಿಂದ ಉತ್ಪನ್ನವಾದ ಗುಳ್ಳೆಗಳನ್ನು, ಬುದ್ಬುದಗಳನ್ನು ಸೆರೆಹಿಡಿ, ಹಿಡಿದುಹಾಕು.
  4. (ರಸಾಯನವಿಜ್ಞಾನ) (ಹಬೆಯಂಥ ವಸ್ತುವಿನ ವಿಷಯದಲ್ಲಿ) ಆವಿಯಾಗಿಸುವ ಯಾ ಬಟ್ಟಿಯಿಳಿಸುವಂಥ ನಿರ್ದಿಷ್ಟ ಪ್ರಕ್ರಿಯೆಯಲ್ಲಿ (ತನಗಿಂತ ಭಿನ್ನವಾದ, ಉದಾಹರಣೆಗೆ ದ್ರವದ ಹನಿಗಳಂಥ ವಸ್ತುವನ್ನು) ತನ್ನ ಜೊತೆಗೆ ಕೊಂಡೊಯ್ಯು, ಸಾಗಿಸು, ಎಳೆದುಕೊಂಡುಹೋಗು.