See also 2dance
1dance ಡಾನ್ಸ್‍
ಸಕರ್ಮಕ ಕ್ರಿಯಾಪದ
  1. ಕುಣಿ; ನರ್ತಿಸು; ನರ್ತನ ಮಾಡು; ನಾಟ್ಯಮಾಡು: she danced the title role in the ballet ಬ್ಯಾಲೆಯಲ್ಲಿ ಆಕೆ ಪ್ರಧಾನ ಪಾತ್ರ ನರ್ತಿಸಿದಳು.
  2. ಕುಣಿಸು; ಕುಣಿಯಿಸು; ನರ್ತನ ಮಾಡಿಸು; ನಾಟ್ಯವಾಡಿಸು; ನರ್ತನ ಮಾಡುವಂತೆ ಮಾಡು.
  3. ಕುಣಿಸು; ಕುಣಿಯಿಸು; ಆಡಿಸು; ಮೇಲಕ್ಕೂ ಕೆಳಕ್ಕೂ ತೂಗಾಡಿಸು: he danced the baby on his knee ಅವನು ಮಂಡಿಯ ಮೇಲೆ ಮಗುವನ್ನು ಕುಣಿಸಿದ.
ಅಕರ್ಮಕ ಕ್ರಿಯಾಪದ
  1. ನರ್ತಿಸು; ನರ್ತನ ಮಾಡು; ನಾಟ್ಯವಾಡು.
  2. (ರೋಷ, ಸಂತೋಷ, ಮೊದಲಾದವುಗಳಿಂದ) ಕುಣಿದಾಡು; ನೆಗೆದಾಡು; ಹಾರಾಡು; ಎಗರಾಡು: a blow that made him dance with pain ನೋವಿಗೆ ಅವನು ಎಗರಾಡುವಂತೆ ಮಾಡಿದ ಏಟು.
  3. (ನೀರು ಮೊದಲಾದವುಗಳ ಮೇಲೆ) ಕುಣಿ; ಮುಳುಗಿ ಮುಳುಗಿ ಮೇಲೇಳು; ಮೇಲಕ್ಕೂ ಕಳಕ್ಕೂ ಆಡು: motes dancing in a beam of light ಬಿಸಿಲುಕೋಲಿನಲ್ಲಿ ಕುಣಿವ ದೂಳಿನ ಕಣಗಳು.
  4. (ಹೃದಯ, ರಕ್ತ, ಮೊದಲಾದವು) ಚಟುವಟಿಕೆಯಿಂದ ಮಿಡಿ; ಉತ್ಸಾಹದಿಂದ ಸ್ಪಂದಿಸು.
ನುಡಿಗಟ್ಟು
  1. dance attendance (up)on a person
    1. ಓಲೈಸು; ಮರ್ಜಿ ಕಾಯು; ಮರ್ಜಿಯನ್ನು ಅನುಸರಿಸು.
    2. ಉದ್ದೇಶಪೂರ್ವಕವಾಗಿ ಒಬ್ಬನಿಂದ ಸುಮ್ಮನೆ ಕಾಯುವಂತಾಗು.
  2. dance one’s chance away ಕುಣಿದು ಕುಣಿದು ಅವಕಾಶ ಕಳೆದುಕೊ.
  3. dance one’s head off ಕುಣಿಕುಣಿದು ತಲೆ ಕೆಡಿಸಿಕೊ.
  4. dance oneself into favour ಕುಣಿಕುಣಿದು ಒಲಿಸಿಕೊ, ಒಬ್ಬನ ಪ್ರೀತಿಗೆ ಪಾತ್ರವಾಗು.
  5. dance to one’s tune (or pipe) ಇನ್ನೊಬ್ಬ ಹೇಳಿದಂತೆ ಕುಣಿ, ನಡೆ, ವರ್ತಿಸು, ಕೇಳು.
  6. dance upon nothing ಗಲ್ಲಿಗೇರಿಸಿಕೊ; ಗಲ್ಲಿಗೇರು.