(ವ್ಯಕ್ತಿ ಯಾ ವಸ್ತುವನ್ನು) ಹಾಳುಗೆಡೆ; (ವ್ಯಕ್ತಿ ಯಾ ವಸ್ತುವಿಗೆ) ಕಳಂಕ ಹಚ್ಚು; ತಲೆಯೆತ್ತದಂತೆ ತಪ್ಪು ಹೊರಿಸು.
ನರಕಕ್ಕೆ ನೂಕು; ಶಪಿಸು.
(ಪ್ರೇಕ್ಷಕರ ವಿಷಯದಲ್ಲಿ) (ನಾಟಕವನ್ನು) ಅನಾದರದಿಂದ ಕಾಣು; ಪುನಃ ಆಡದಂತೆ ಮಾಡು.
(ದೋಷವನ್ನು ಬಹಿರಂಗವಾಗಿ ಹೇಳಿ) ಖಂಡಿಸು; ತೆಗಳು; ನಿಂದಿಸು; ದೂಷಿಸು; ತಪ್ಪು ಹೊರಿಸು; ದೋಷಾರೋಪಣೆ ಮಾಡು: the book was damned by the critics ವಿಮರ್ಶಕರು ಪುಸ್ತಕವನ್ನು ಖಂಡಿಸಿದರು.
ಹಾನಿ ತರು; ನಾಶ ತರು; ಕಳಂಕ, ಭಂಗ – ತರು: a democracy is damned when its leaders are slaves ನಾಯಕರು ದಾಸರಾಗಿದ್ದರೆ ಆ ಗಣತಂತ್ರ ನಾಶವಾಗುತ್ತದೆ.
(ಆಡುಮಾತು) (ಕೋಪ, ಕಿರಿಕಿರಿ, ಮೊದಲಾದವನ್ನು ಸೂಚಿಸುವಾಗ) ಶಪಿಸು; ‘ಹಾಳಾಗು’ ಎನ್ನು:damn your eyes ನಿನ್ನ ಕಣ್ಣು ಇಂಗಿ ಹೋಗ.
ಅಕರ್ಮಕ ಕ್ರಿಯಾಪದ
(ಅಸಮಾಧಾನ, ಜುಗುಪ್ಸೆ, ಆಶ್ಚರ್ಯಗಳನ್ನು ಸೂಚಿಸಲು ಸಾಮಾನ್ಯವಾಗಿ ಭಾವಸೂಚಕ ಅವ್ಯಯವಾಗಿ ಬಳಸುವ ಪದ) ಹಾಳಾಗ!
ನುಡಿಗಟ್ಟು
damn all (ಅಶಿಷ್ಟ) ಏನೇನೂ, ಸ್ವಲ್ಪವೂ – ಇಲ್ಲ.
damn it ಹಾಳಾಗ!
damn with faint praise ಮನಸ್ಸಿಲ್ಲದ ಯಾ ನಿರುತ್ಸಾಹದ ಹೊಗಳಿಕೆಯ ಮೂಲಕ ಅಸಮ್ಮತಿ ಯಾ ಅತೃಪ್ತಿ ಸೂಚಿಸು; ಶೀತಸ್ತುತಿ ಮಾಡು.
I’ll be damned (ಆಡುಮಾತು) ನನಗೆ ಆಶ್ಚರ್ಯವಾಗಿದೆ; ಇದು ನನ್ನನ್ನು ಅಚ್ಚರಿಗೊಳಿಸಿದೆ.
(I’m, I’ll be) damned if I will agree ನಾನು ಒಪ್ಪಿದರೆ ಆಗ ಕೇಳು; ನಾನು ಎಂದಿಗೂ ಒಪ್ಪುವುದಿಲ್ಲ.