See also 2bridge  3bridge
1bridge ಬ್ರಿಜ್‍
ನಾಮವಾಚಕ
  1. ಸೇತುವೆ; ಸಂಕ; ಪೂಲು (ರೂಪಕವಾಗಿ ಸಹ).
  2. (ನೌಕಾಯಾನ) ಹಡಗಿನ ಸೇತುವೆ; ಹಡಗಿನಲ್ಲಿ ಹಡಗಿನ ಚಾಲನೆಯನ್ನು ನೋಡಿಕೊಳ್ಳಲು, ಕ್ಯಾಪ್ಟ್‍ಅನ್‍ಗಾಗಿ ನಿರ್ಮಿಸಿರುವ, ಸೇತುವೆಯಂತೆ ಎತ್ತರವಾದ ವೇದಿಕೆ.
  3. ಮೂಗೇಣು; ಮೂಗಿನ ಕಂಬ; ಮೂಗಿನ ಮೇಲ್ಗಡೆಯ ಎಲುಬಿನ ಭಾಗ.
  4. ಕುದುರೆ; ಮೇರು; ಪಿಟೀಲು, ತಂಬೂರಿ, ವೀಣೆ ಮೊದಲಾದ ವಾದ್ಯಗಳಲ್ಲಿ ತಂತಿಗಳು ಯಾವುದರ ಮೇಲೆ ಹಾಯುವುದೋ ಮತ್ತು ಶ್ರುತಿ ಮಾಡುವಲ್ಲಿ ಯಾವುದನ್ನು ಹಿಂದಕ್ಕೂ ಮುಂದಕ್ಕೂ ಸರಿಸಬಹುದೋ ಅಂತಹ ಮರದ ಚೆಕ್ಕೆ.
  5. (ಬಿಲ್ಯಡ್‍’) ಊರೆಗೋಲು; ದಾಂಡಿಗೆ ಊರೆಕೊಡುವಂತೆ ಒಂದು ತುದಿಯನ್ನು ಅಳವಡಿಸಿರುವ ಉದ್ದನೆ ಕೋಲು.
  6. (ಬಿಲ್ಯಡ್‍’) ಊರೆ; ಸರಿಯಾಗಿ ಗುರಿಯಿಡಲು ಬಿಲ್ಯಡ್‍’ ಕೋಲಿಗೆ ಊರೆಕೊಡುವ, ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳಿಗೆ ನಡುವಣ ಭಾಗ.
  7. = bridgework.
  8. = land-bridge.
ಪದಗುಚ್ಛ

bridge of asses = pons asinorum.

ನುಡಿಗಟ್ಟು
  1. bridge of gold ಹೊನ್ನಸೇತುವೆ; ಸ್ವರ್ಣಸೇತು; ಸೋತುಹೋದ ಶತ್ರುವು ಸೋಲಿನ ಅವಮಾನಕ್ಕೊಳಗಾಗದೆ ತಲೆತಪ್ಪಿಸಿಕೊಂಡು ಹೋಗುವಂತೆ ಅವನಿಗಾಗಿ ಮಾಡಿಕೊಟ್ಟಿರುವ ಸುಲಭವಾದ ಮಾರ್ಗ.
  2. 2burn one’s bridges.
  3. cross a bridge when one comes to it ಸೇತುವೆ ಬಂದಾಗ ಅದನ್ನು ದಾಟು; ಸಮಸ್ಯೆ ಎದುರಾದಾಗ ಅದರ ಪರಿಹಾರ ಹುಡುಕು (ಮೊದಲೇ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ).
  4. golden bridge = ನುಡಿಗಟ್ಟು \((1)\).