1attention
ಅಟೆನ್ಷನ್
ನಾಮವಾಚಕ
- ಗಮನ; ನಿಗಾ; ಅವಧಾನ; ಲಕ್ಷ್ಯ:
- ಗಮನ ಕೊಡುವುದು: pay attention ಗಮನ ಕೊಡು.
- ಗಮನ ಕೊಡುವ ಇಂದ್ರಿಯ ಯಾ ಮನಶ್ಯಕ್ತಿ: attract attention ಗಮನ ಸೆಳೆ. call attention to the notice ಸೂಚನೆಗೆ ಗಮನ ಸೆಳೆ.
- ಎಚ್ಚರಿಕೆ; ಜಾಗರೂಕತೆ.
- ಸೌಜನ್ಯ; ಆದರಣೆ; ವಿನಯ; ಉಪಚಾರ; ಅನುನಯ.
- (ಬಹುವಚನದಲ್ಲಿ) ಆದರ ಸತ್ಕಾರ; ಮರ್ಯಾದೆಯ ಉಪಚಾರ.
- (ಸೈನ್ಯ) ಸಾವಧಾನ; (ಸಿದ್ಧತೆಯ) ನೆಟ್ಟನೆ ನಿಲುವು.
ನುಡಿಗಟ್ಟು
- pay one’s attentions to ಅನುನಯಿಸು; ಓಲೈಸು; ಪ್ರೀತಿಗಳಿಸಲು ಅನುಸರಣೆ ಮಾಡು.
- rivet one’s attention on ಪೂರ್ತಿ ನಿಗಾ ಇಡು; ದೃಷ್ಟಿ ನೆಡು: ಗಮನ ಕೇಂದ್ರೀಕರಿಸು.