See also 1attack
2attack ಅಟ್ಯಾಕ್‍
ನಾಮವಾಚಕ
  1. ಮೇಲೆ ಬೀಳುವಿಕೆ; ಮೇಲೆರಗುವಿಕೆ; ಆಕ್ರಮಣ; ಹಲ್ಲೆ.
  2. ಕದನಾರಂಭ.
  3. (ರೋಗ ಮೊದಲಾದವುಗಳ) ಹಠಾತ್‍ ತಗುಲಿಕೆ; ಅಡಸುವಿಕೆ; ಆಘಾತ: heart attack ಹೃದಯಾಘಾತ.
  4. (ಮುಖ್ಯವಾಗಿ ಕಷ್ಟಸಾಧ್ಯವಾದ ಕೆಲಸದ) ಕಾರ್ಯಾರಂಭ.
  5. (ಪಂದ್ಯ, ಸ್ಪರ್ಧೆಯಲ್ಲಿ) ಹುರುಪಿನ ಪ್ರಾರಂಭ; ಬಿರುಸಿನ ಪ್ರಾರಂಭ.
  6. ಬಿರು ಬಯ್ಗುಳ; ಖಂಡನೆ; ದೂಷಣೆ.
  7. (ಸಂಗೀತ) ಎತ್ತುಗಡೆ; ಕೃತಿಯನ್ನು ಹಾಡಲು ಯಾ ನುಡಿಸಲು ಆರಂಭಿಸುವುದು ಯಾ ಆರಂಭಿಸುವ ರೀತಿ, ವೈಖರಿ.
  8. (ನೆಟ್‍ಬಾಲ್‍, ಲಕ್ರಾಸ್‍, ಮೊದಲಾದ ಆಟಗಳಲ್ಲಿ) ಮುಂಚೂಣಿ – ಆಟಗಾರ, ಹೊಡೆತಗಾರ; ಮುಂದುಗಡೆಯಲ್ಲಿರುವ, ಮುನ್‍ಸಾಲಿನಲ್ಲಿರುವ ಆಟಗಾರ.