See also 1art  3art
2art ಆರ್ಟ್‍
ನಾಮವಾಚಕ
  1. ಮಾನವ ಕೌಶಲ; ನಿಸರ್ಗಕ್ಕಿಂತ ಭಿನ್ನವಾದ ಮಾನವನ ಚಾತುರ್ಯ; ನಿಪುಣತೆ.
  2. ಕೃತ್ರಿಮ; ತಂತ್ರ; ವಂಚನೆ; ಉಪಾಯ.
  3. ಕಲೆ; ಶಿಲ್ಪ; ವರ್ಣಚಿತ್ರ, ವಾಸ್ತುಶಿಲ್ಪ, ಮೊದಲಾದವುಗಳಲ್ಲಿರುವಂತೆ ವಿನ್ಯಾಸಕ್ಕೆ ಅನುಕರಣ ಕೌಶಲದ ಯಾ ಕಲ್ಪನಾ ಕೌಶಲದ ಅನ್ವಯ; ಸುಂದರ ಆಕೃತಿಗಳ ಕುಶಲ ನಿರ್ಮಾನ.
  4. (ಬಹುವಚನದಲ್ಲಿ) ಲಲಿತ ಕಲೆಗಳು.
  5. ಕಲಾಕೌಶಲವನ್ನು ಬಳಸಬಹುದಾದ ಅವಕಾಶವಿರುವಂಥದು: advertising art ಜಾಹಿರಾತು ಕಲೆ.
  6. (ಬಹುವಚನದಲ್ಲಿ) ಕಲೆಗಳು; ವಿಜ್ಞಾನಕ್ಕಿಂತ ಭಿನ್ನವಾದ ಭಾಷೆ, ಸಾಹಿತ್ಯ, ತತ್ತ್ವ ಶಾಸ್ತ್ರ, ಚರಿತ್ರೆ, ಮೊದಲಾದ ವಿದ್ಯಾವಿಭಾಗಗಳು.
  7. ತಂತ್ರ; ಯಾವುದೇ ವಿಜ್ಞಾನದ ಪ್ರಾಯೋಗಿಕ ಬಳಕೆ, ಅನ್ವಯ.
  8. ಕಸಬು; ವೃತ್ತಿ; ಕುಶಲಕರ್ಮ.
  9. (ಸಹಜವಾದ ಯಾ ಕಲಿತ ಯಾವುದೇ) ಜಾಣ್ಮೆ; ಉಪಾಯ; ಕಾರ್ಯಕೌಶಲ; ಯುಕ್ತಿ; ತಂತ್ರ; ಚಾತುರ್ಯ.
  10. (ವರ್ಣಚಿತ್ರಗಳು, ರೇಖಾಚಿತ್ರಗಳು, ಮೊದಲಾದ) ಕಲಾಕೃತಿಗಳು: a museum of art ಕಲಾಕೃತಿಗಳ ಸಂಗ್ರಹಾಲಯ.
  11. (ಮುದ್ರಣದಲ್ಲಿ) ಚಿತ್ತಾರ; ಚಿತ್ರಾಲಂಕಾರ; ವೃತ್ತ ಪತ್ರಿಕೆ, ಜಾಹೀರಾತು, ಮೊದಲಾದವುಗಳಲ್ಲಿ ಬರಹದ ಜೊತೆಗಿರುವ ಚಿತ್ರ, ಅಲಂಕಾರ.
  12. ಕಲೆ; ಯಾವುದೇ ಕಸುಬು, ಕೌಶಲ ಯಾ ವಿದ್ಯಾವಿಭಾಗದ ಸೂತ್ರಗಳು ಯಾ ವಿಧಾನಗಳು: the art of cooking ಪಾಕ ಕಲೆ; ಅಡಿಗೆ ಕಲೆ.
ಪದಗುಚ್ಛ
  1. art and part (ಮುಖ್ಯವಾಗಿ ಸ್ಕಾಟ್‍ ನ್ಯಾಯಶಾಸ್ತ್ರ) ಸಹಭಾಗಿ; ಸಹಾಯಕ; ಯಾವುದೇ ಅಪರಾಧವನ್ನು ನಿಯೋಜಿಸುವುದರಲ್ಲಿ ಯಾ ಮಾಡುವುದರಲ್ಲಿ ಯಾ ಎರಡರಲ್ಲೂ ಪಾಲುಗೊಳ್ಳುವವನು.
  2. arts and crafts ಕುಶಲ ಕಲೆಗಳು ಯಾ ವಸ್ತುಗಳು; ಕುಶಲ ಕೈಕಸುಬುಗಳು; ಕುಶಲ ಕೈಗಾರಿಕೆಗಳು ಯಾ ಕೈಗಾರಿಕಾ ವಸ್ತುಗಳು ಅಲಂಕರಣದ ಸುಂದರವಾದ ಕೈಕೆಲಸದ ವಸ್ತುಗಳು.
  3. Bachelor of Arts ವಿಶ್ವವಿದ್ಯಾನಿಲಯದ ಆರ್ಟ್ಸ್‍ ವಿಭಾಗದಲ್ಲಿ ಸ್ನಾತಕ ಪದವಿ ಪಡೆದವ(ಳು).
  4. Master of Arts ವಿಶ್ವವಿದ್ಯಾನಿಲಯದ ಆರ್ಟ್ಸ್‍ ವಿಭಾಗದಲ್ಲಿ ಮಾಸ್ಟರ್‍ ಪದವಿ ಪಡೆದವ(ಳು).