2array
ಅರೇ
ನಾಮವಾಚಕ
- ಸೇನಾವಿನ್ಯಾಸ; ಸೇನಾವ್ಯೂಹ.
- (ನ್ಯಾಯಶಾಸ್ತ್ರ)
- ನ್ಯಾಯದರ್ಶಿಗಳು; ಜ್ಯೂರಿಗಳು.
- ನ್ಯಾಯದರ್ಶಿಗಳ ಪಟ್ಟಿ; ಜ್ಯೂರಿಗಳ ಆಯ್ಕೆಪಟ್ಟಿ.
- (ಯಾವುದೇ ವಿಶಿಷ್ಟ ಲಕ್ಷಣವುಳ್ಳ ವಿವಿಧ ವಸ್ತುಗಳ, ಜನರ, ವ್ಯವಸ್ಥಿತವಾದ) ಸಾಲು; ತಂಡ; ಶ್ರೇಣಿ: an array of literary men ಸಾಹಿತಿಗಳ ಶ್ರೇಣಿ.
- (ಗಣಿತ) ಸರಣಿ; ಗಣಿತಸಂಖ್ಯೆಗಳನ್ನಾಗಲಿ, ಚಿಹ್ನೆಗಳನ್ನಾಗಲಿ ಉದ್ದ ಮತ್ತು ಅಡ್ಡಸಾಲುಗಳಲ್ಲಿ ಜೋಡಿಸಿರುವಿಕೆ.
- (ಕಾವ್ಯಪ್ರಯೋಗ) ಉಡಿಗೆತೊಡಿಗೆಗಳು; ದಿರಿಸು; ಪೋಷಾಕು.
- (ಚರಿತ್ರೆ) ಪ್ರಜಾಸೈನಿಕದಳವನ್ನು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವಿಕೆ.
- ಸೈನ್ಯ.