1arm
ಆರ್ಮ್
ನಾಮವಾಚಕ
- ರಟ್ಟೆ; ತೋಳು; ಬಾಹು.
- (ಪ್ರಾಣಿಗಳ) ಮುಂಗಾಲು.
- ತೋಳು; ಬಾಹು; ಚಾಚಣಿ; ಅಕಶೇರುಕ ಪ್ರಾಣಿಗಳಲ್ಲಿ ಚಾಚಿಕೊಂಡಿರುವ ಚಲನಾಂಗ.
- (ಅಂಗಿಯ, ಕುರ್ಚಿಯ, ತಕ್ಕಡಿಯ, ಗಾಳಿಗಿರಣಿಯ) ಕೈ; ತೋಳು; ಬಾಹು.
- ಚಾಚು; ಚಾಚಿಕೆ; ಕೋವೆ; ಒಂದು ದ್ವೀಪ, ಸಮುದ್ರ, ಪರ್ವತಶ್ರೇಣಿ, ಮೊದಲಾದವುಗಳ ಮುಖ್ಯ ಭಾಗದಿಂದ ಒಂದು ಕಡೆಗೆ ಚಾಚಿಕೊಂಡಿರುವ ಭಾಗ.
- (ಗಿಡಮರಗಳ) ಕೊಂಬೆ; ರೆಂಬೆ; ಶಾಖೆ.
- (ಆಡಳಿತದ ಯಾ ಸೈನ್ಯದ) ಶಾಖೆ; ವಿಭಾಗ; ಅಂಗ.
- (ನದಿಯ) ಸೀಳು; ಕವಲು.
- (ರೂಪಕವಾಗಿ) ಬಲ; ಶಕ್ತಿ; ಸಾಮರ್ಥ್ಯ; ಅಧಿಕಾರ: arm of the law ಕಾನೂನಿನ ಬಲ.
- (ಕಾರ್ಯ ಚಟುವಟಿಕೆಯ) ಅಂಗ; ಸಾಧನ: literature, utilised as an arm of propaganda ಪ್ರಚಾರದ ಅಂಗವಾಗಿ ಬಳಸಿಕೊಂಡ ಸಾಹಿತ್ಯ.
ಪದಗುಚ್ಛ
- on one’s arm ತೋಳಿನ ಮೇಲೆ ಊರಿಕೊಂಡು.
- under one’s arm ಕಂಕುಳಿನಲ್ಲಿ; ಕಂಕುಳಿನ ಕೆಳಗೆ.
ನುಡಿಗಟ್ಟು
- arm in arm
- ಬಹಳ ಸ್ನೇಹದಿಂದ; ಒಮ್ಮತದಿಂದ; ಒಂದಿಗೆ.
- ತೋಳಿನಲ್ಲಿ ತೋಳುಹಾಕಿ; ತೋಳಿಗೆ ತೋಳು – ತೆಕ್ಕೆ ಹಾಕಿಕೊಂಡು, ಸೇರಿಸಿ.
- as long as my or your arm (ಆಡುಮಾತು) ತೋಳುದ್ದದ; ತುಂಬ ಉದ್ದವಾದ.
- at arm’s length
- ಕೈಗೆ ಎಟುಕುವಷ್ಟು ದೂರದಲ್ಲಿ
- ದೂರದಲ್ಲಿ; ಅನುಚಿತ ಸಲಿಗೆ ತೆಗೆದುಕೊಳ್ಳುವುದನ್ನು ತಪ್ಪಿಸುವಷ್ಟು ಅಂತರದಲ್ಲಿ.
- (ವ್ಯವಹಾರದ ವಿಷಯದಲ್ಲಿ) ಪರಸ್ಪರ ಸ್ವತಂತ್ರವಾಗಿ; ಇಬ್ಬರಲ್ಲಿ ಒಬ್ಬನ ಮೇಲೆ ಇನ್ನೊಬ್ಬನ ಹತೋಟಿ ಇಲ್ಲದಂತೆ.
- infant in arms ಕೈ ಕೂಸು; ನಡೆಯಲಾಗದಷ್ಟು ಎಳೆಯ ಕೂಸು.
- in person’s arms ಒಬ್ಬನ ತೋಳ ತೆಕ್ಕೆಯಲ್ಲಿ; ತಬ್ಬಿಕೊಂಡು; ಆಲಿಂಗನದಲ್ಲಿ.
- within arm’s reach (ಕುರ್ಚಿ ಮೊದಲಾದವುಗಳಿಂದ ಅಲುಗಾಡದೆಯೇ) ಕೈಗೆಟಕುವಷ್ಟು; ಕೈಚಾಚಿಕೆಗೆ ಸಿಕ್ಕುವ; ಹತ್ತಿರದಲ್ಲಿರುವ.
- with open arms ತೆರೆದ ತೋಳಿನಿಂದ; ಅತ್ಯಾದರದಿಂದ; ತುಂಬು ಸ್ವಾಗತದಿಂದ.