1arithmetic
ಅರಿತ್ಮ(ಮಿ)ಟಿಕ್
ನಾಮವಾಚಕ
- ಅಂಕಗಣಿತ; ಲೆಕ್ಕ; ನೈಜ ಸಂಖ್ಯೆಗಳ ಗುಣಲಕ್ಷಣಗಳು, ಅವುಗಳಿಗಿರುವ ಪರಸ್ಪರ ಸಂಬಂಧ, ಮೊದಲಾದವನ್ನೊಳಗೊಂಡ ಗಣಿತ ಶಾಖೆ.
- ಅಂಕಗಣಿತ ಜ್ಞಾನ; ಲೆಕ್ಕದ ತಿಳಿವು: his arithmetic is bad ಅವನಿಗೆ ಅಂಕಗಣಿತದ ಜ್ಞಾನ ಸಾಲದು.
- ಲೆಕ್ಕ; ಎಣಿಕೆ; ಲೆಕ್ಕದ ಕ್ರಮ: your arithmetic is wrong ನಿನ್ನ ಲೆಕ್ಕ ತಪ್ಪು.