1ahead
ಅಹೆಡ್
ಕ್ರಿಯಾವಿಶೇಷಣ
- (ಕಾಲ ಯಾ ಪ್ರದೇಶದ ವಿಷಯದಲ್ಲಿ) ಮುಂದಾಗಿ; ಮುಂದೆ; ಎಲ್ಲಕ್ಕಿಂತಲೂ ಯಾ ಎಲ್ಲರಿಗಿಂತಲೂ ಮುಂದೆ: look ahead ಮುಂದೆ ನೋಡು.
- ನೆಟ್ಟೆದುರಿಗೆ; ಕಟ್ಟೆದುರಿಗೆ; ಹೋಗುತ್ತಿರುವ ದಿಕ್ಕಿನಲ್ಲಿ: there is a chasm ahead ಕಟ್ಟೆದುರಿಗೆ ಒಂದು ಕಮರಿಯಿದೆ.
- ತ್ವರೆಯಿಂದ; ಲೆಕ್ಕಿಸದೆ ಮುಂದಕ್ಕೆ.
- ಮೊದಲೇ; ಮುಂಚೆಯೇ: plan ahead ಮುಂಚೆಯೇ ಯೋಜಿಸು.
- ಮೇಲೇರಿ; ಮುಂದುವರಿದು (ರೂಪಕವಾಗಿ ಸಹ): he is sure to get ahead ಅವನು ಮುಂದುವರಿಯುವುದು ಖಂಡಿತ.
ಪದಗುಚ್ಛ
ahead of
- (ಇನ್ನೊಂದಕ್ಕಿಂತ) ಮುಂದೆ ಇರುವ ಯಾ ಹೋಗಿರುವ (ರೂಪಕವಾಗಿ ಸಹ): infantry ahead of cavalry ರಾವುತರಿಗಿಂತ ಮುಂದೆ ಪದಾತಿ.
- ಮೀರಿದ; ಮೀರಿಸಿದ: demand ahead of production ಉತ್ಪಾದನೆಯನ್ನು ಮೀರಿದ ಬೇಡಿಕೆ.
ನುಡಿಗಟ್ಟು
go ahead
- ಮುಂದುವರಿ; ಮುಂದುವರಿಸು: things are going ahead ಕೆಲಸಗಳು ಮುಂದುವರಿಯುತ್ತಿವೆ.
- (ಆಡುಮಾತು) ಹೇಳಬೇಕೆಂದಿರುವುನ್ನು ಹೇಳು, ಮುಂದುವರಿಸು.
- (ರೂಪಕವಾಗಿ) ಲೆಕ್ಕಿಸದೆ ಮುನ್ನುಗ್ಗು; ನಿರ್ಲಕ್ಷ್ಯದಿಂದ ಮುಂದುವರಿ.