2aggregate ಆಗ್ರಿಗೇಟ್‍
ಸಕರ್ಮಕ ಕ್ರಿಯಾಪದ
  1. ಒಟ್ಟುಗೂಡಿಸು; ಸಮೂಹಿಸು; ಸೇರಿಸು; ಜಮಾಯಿಸು; ಶೇಖರಿಸು; ಸಂಗ್ರಹಿಸು: wealth aggregated by their labour ಅವರ ಶ್ರಮದಿಂದ ಸೇರಿಸಿದ ಐಶ್ವರ್ಯ.
  2. (ಸಂಘಕ್ಕೆ ಯಾ ಸಂಸ್ಥೆಗೆ ವ್ಯಕ್ತಿಯನ್ನು) ಸೇರಿಸು; ಸದಸ್ಯನನ್ನಾಗಿ ಮಾಡು.
  3. (ಆಡುಮಾತು) ಒಟ್ಟು (ಅಷ್ಟು ಯಾ ಅಷ್ಟು ಮೊತ್ತ) ಆಗು; ಒಟ್ಟು ಅಷ್ಟಾಗು: the audience aggregating a million people ಹತ್ತುಲಕ್ಷದಷ್ಟಾಗಿದ್ದ ಶ್ರೋತೃಗಳು.
ಅಕರ್ಮಕ ಕ್ರಿಯಾಪದ

ಒಟ್ಟುಗೂಡು; ಒಟ್ಟಾಗಿ ಸೇರು; ಸಂಗ್ರಹಗೊಳ್ಳು; ಒಟ್ಟಾಗು: people aggregated in predesignated places ಮೊದಲೇ ಗೊತ್ತು ಮಾಡಿದ್ದ ಜಾಗಗಳಲ್ಲಿ ಜನರು ಒಟ್ಟು ಸೇರಿದರು.