See also 2account
1account ಅಕೌಂಟ್‍
ಸಕರ್ಮಕ ಕ್ರಿಯಾಪದ
  1. (ಗತಪ್ರಯೋಗ) ಲೆಕ್ಕಿಸು; ಗಣಿಸು.
  2. ಎಣಿಸು; ಪರಿಗಣಿಸು: account a hero, wise, to be guilty ಅವನನ್ನು ಶೂರ, ವಿವೇಕಿ, ಅಪರಾಧಿ ಎಂದು ಪರಿಗಣಿಸು.
ಅಕರ್ಮಕ ಕ್ರಿಯಾಪದ
  1. ಲೆಕ್ಕಿಸು; ಲೆಕ್ಕಮಾಡು; ಗಣಿಸು.
  2. (ಹಣದ) ಲೆಕ್ಕ ಕೊಡು; ಲೆಕ್ಕ ಒಪ್ಪಿಸು: the broker accounted satisfactorily for his expenditures ಆ ದಳ್ಳಾಳಿ ತನ್ನ ಖರ್ಚುವೆಚ್ಚಗಳಿಗೆ ತೃಪ್ತಿಕರವಾಗಿ ಲೆಕ್ಕ ಒಪ್ಪಿಸಿದ.
  3. ಕಾರಣ ಕೊಡು; ಕಾರಣ ವಿವರಿಸು; ವಿವರಣೆ ನೀಡು; ಸಮಜಾಯಿಷಿ ನೀಡು; ಸಮಾಧಾನ ಕೊಡು: account for the accident ಆ ಆಕಸ್ಮಿಕಕ್ಕೆ ಕಾರಣ ಕೊಡು. that accounts for it ಅದಕ್ಕೆ ಸಮಜಾಯಿಷಿ ಅದು.
  4. (ಸಾವು, ಸೋಲು, ವಜಾ, ಮೊದಲಾದವುಗಳಿಗೆ) ಕಾರಣವಾಗು; ಕಾರಣವಾಗಿರು: his rash driving accounted for the accident ಅವನು ದುಡುಕಿನಿಂದ ವಾಹನ ನಡೆಸಿದ್ದು ಅಪಘಾತಕ್ಕೆ ಕಾರಣವಾಯಿತು.
  5. ಕೊಂದು ಹಾಕು; ಮುಗಿಸಿ ಬಿಡು; ಪೂರೈಸಿಬಿಡು; ತೀರಿಸಿಬಿಡು: his dog accounted for two of the rabbits ಅವನ ನಾಯಿಯು ಮೊಲಗಳ ಪೈಕಿ ಎರಡನ್ನು ತೀರಿಸಿ ಬಿಟ್ಟಿತು.