See also 2abuse
1abuse ಅಬ್ಯೂಸ್‍
ಸಕರ್ಮಕ ಕ್ರಿಯಾಪದ
  1. ದುರುಪಯೋಗಪಡಿಸು; ದುರುಪಯೋಗ ಮಾಡು; ದುರುಪಯೋಗಪಡಿಸಿಕೊ: abuse one’s authority ಅಧಿಕಾರವನ್ನು ದುರುಪಯೋಗಪಡಿಸಿಕೊ.
  2. (ಪ್ರಾಚೀನ ಪ್ರಯೋಗ) (ಈಗ ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ ಮಾತ್ರ) ಮೋಸಗೊಳಿಸು; ವಂಚಿಸು: I did not know that I had been abused ನಾನು ವಂಚಿತನಾದೆನೆಂದು ನನಗೆ ತಿಳಿಯಲಿಲ್ಲ.
  3. (ಕೆಟ್ಟದಾಗಿ, ಅಪಶಬ್ದದಿಂದ) ಬಯ್ಯು; ತೆಗಳು; ದೂಷಿಸು; ನಿಂದಿಸು.
  4. ನೋಯಿಸು; ನೋವುಂಟುಮಾಡು; ನೋವಾಗುವಂತೆ, ಹಾನಿಯಾಗುವಂತೆ–ವರ್ತಿಸು: to abuse a horse by overworking ಮಿತಿಮೀರಿ ದುಡಿಸಿ ಕುದುರೆಗೆ ನೋವಾಗುವಂತೆ ಮಾಡು. abuse one’s eye sight by reading in dim light ಮಂದ ಬೆಳಕಿನಲ್ಲಿ ಓದುವುದರ ಮೂಲಕ ದೃಷ್ಟಿಗೆ ಹಾನಿಮಾಡಿಕೊ.
ಪದಗುಚ್ಛ

abuse oneself ಮುಷ್ಟಿಮೈಥುನ ಮಾಡಿಕೊ.