ಗ್ರಂಥಾಲಯದ ನಿಯಮಾವಳಿಗಳು

 1. ಗ್ರಂಥಾಲಯದ ಸದ್ಯಸರು ಗ್ರಂಥಾಲಯದ ನಿಯಮಾವಳಿಗಳನ್ನು ಗ್ರಂಥಾಲಯದ ಪರಿಣಾಮಕಾರಿ ಆಡಳಿತಕ್ಕಾಗಿ ಹಾಗೂ ಉತ್ತಮ ಕಾರ್ಯನಿರ್ವಹಣೆಗಾಗಿ ಪಾಲಿಸತಕ್ಕದು.
 2. ಪಿಜಿ ಕೋರ್ಸ್ / ಪಿಜಿ ಡಿಪ್ಲೋಮ ಹಾಗು ಸರ್ಟಿಫಿಕೇಟ್ ಕೋರ್ಸ್ ಗಳ ವಿದ್ಯಾರ್ಥಿಗಳು ಪುಸ್ತಕ ಪಡೆಯಲು ಗ್ರಂಥಾಲಯದ ಸದ್ಯಸತ್ವಕ್ಕಾಗಿ ಅರ್ಜಿ ಸಲ್ಲಿಸಿ ಕಡಾಯವಾಗಿ ಗ್ರಂಥಾಲಯದ ಸದ್ಯಸತ್ವ ಪಡೆದಿರಬೇಕು.
 3. ಸದ್ಯಸರು ಗ್ರಂಥಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ಸದ್ಯಸ್ವತ ದಾಖಲಾತಿಗಳನ್ನು ಕಡಾಯವಾಗಿ ತಂದಿರಬೇಕು.
 4. ಸದ್ಯಸರು ಗ್ರಂಥಾಲಯದ ಪುಸ್ತಕಗಳನ್ನು ಇರಿಸಲಾದ ಪ್ರದೇಶಕ್ಕೆ ಭೇಟಿ ನೀಡುವಾಗ ತಮ್ಮ ಕೈಚೀಲ ಹಾಗೂ ಇತರೆ ವಸ್ತುಗಳನ್ನು ಕಡ್ಡಾಯವಾಗಿ ಗ್ರಂಥಾಲಯದ ಭದ್ರತಾ ಕೌಂಟರ್ ನಲ್ಲಿ ಇಟ್ಟು, ಟೋಕನ್ ಕೇಳಿ ಪಡೆದುಕೊಳತಕ್ಕದು.
 5. ಓದುಗರು ಗ್ರಂಥಾಲಯಕ್ಕೆ ಬರುವಾಗ ಯಾವುದೇ ಬೆಲೆಬಾಳುವ / ದುಬಾರಿ ವಸ್ತುಗಳನ್ನು ಅಂದರೆ, ಆಭರಣಗಳು, ಹಣ, ಮೊಬೈಲ್ಗಳು ಮತ್ತು ಯಾವುದೇ ಇತರ ಉಪಕರಣಗಳನ್ನು ತರಬಾರದು.
 6. ಭದ್ರತಾ ಕೌಂಟರ್ನಲ್ಲಿರುವ ಸಿಬ್ಬಂದಿಗೆ ಸದಸ್ಯತ್ವ ID ಕಾರ್ಡ್ ಅನ್ನು ಪರಿಶೀಲಿಸಲು ಅನುಮತಿಯಿರುತ್ತದೆ.
 7. ಎಲ್ಲ ಓದುಗರು ಕಡ್ಡಾಯವಾಗಿ ತಮ್ಮ ಸಹಿಯನ್ನು ಸೆಕ್ಯೂರಿಟಿ ಡೆಸ್ಕ್ ನಲ್ಲಿ ಇರಿಸಲಾದ ಹಾಜರಾತಿ ಪುಸ್ತಕದಲ್ಲಿ ಮಾಡಬೇಕು.
 8. ಸದ್ಯಸರು ಗ್ರಂಥಾಲಯದ ಆವರಣದಲ್ಲಿ ತಮ್ಮ ಸ್ವಂತ ಪುಸ್ತಕಗಳನ್ನು, ಜರ್ನಲ್ಸ್ ಹಾಗೂ ಇತರ ಇಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ತರುವುದನ್ನು ನಿಷೇದಿಸಲಾಗಿದೆ.
 9. ಓದುಗರು ಮಾತನಾಡುವಾಗ ಕಡಿಮೆ ಧ್ವನಿಯಲ್ಲಿ ಮಾತನಾಡಲು ಗ್ರಂಥಾಲಯವು ವಿನಂತಿಸಿಕೊಳುತ್ತದೆ.
 10. ಓದುಗರು ಪುಸ್ತಕದ ಹಾಳೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುವಾಗ ಮಡಚಬಾರದು ಎಂದು ಗ್ರಂಥಾಲಯವು ಮನವಿ ಮಾಡಿಕೊಳ್ಳುತ್ತದೆ.
 11. ಗ್ರಂಥಾಲಯ ಸದ್ಯಸರು ಗ್ರಂಥಾಲಯದ ಒಳಗೆ ಇರುವಾಗ ಮೊಬೈಲ್ / ಟ್ಯಾಬ್ಲೇಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬೇಕು.
 12. ಗ್ರಂಥಾಲಯ ಸದ್ಯಸರು ಗ್ರಂಥಾಲಯದ ಒಳಗೆ ಇರುವಾಗ ಕಸವನ್ನು ಕಂಡಕಂಡಲ್ಲಿ ಎಸೆಯಬಾರದು. ಕಸವನ್ನು ಆಯಾಯ ಸ್ಥಳಗಳಲ್ಲಿ ಇರಿಸಲಾದ ಕಸದ ತೊಟ್ಟಿಯಲ್ಲಿ ಹಾಕಬೇಕು.
 13. ಗ್ರಂಥಾಲಯ ಸದ್ಯಸರು ಗ್ರಂಥಾಲಯದಲ್ಲಿರುವ ಪುಸ್ತಕದ ಹಾಳೆಗಳನ್ನು ಹರಿಯಬಾರದು. ಹಾಗೊಂದು ವೇಳೆ ಆ ಪುಟದ ಮಾಹಿತಿ ಬೇಕಿದ್ದರೆ, ಆ ಪುಟವನ್ನು ಜೆರಾಕ್ಸ್ ಮಾಡಿಸಿಕೊಳ್ಳತ್ತಕ್ಕದ್ದು.
 14. ಗ್ರಂಥಾಲಯದ ಜೋಡಿಸಿಟ್ಟ ದಾಖಲೆ, ಪುಸ್ತಕಗಳನ್ನು ಎಲ್ಲಿ-ಎಲ್ಲಿಯೋ ಇಡಬೇಡಿ. ನೋಡಿ, ಓದಿ ಅಥವಾ ಜೆರಾಕ್ಸ್ ಮಾಡಿದ ನಂತರ ಮತ್ತೆ ಅದೇ ಜಾಗದಲ್ಲಿ ಸರಿಯಾಗಿ ಜೋಡಿಸಿಡಿ.
 15. ಗ್ರಂಥಾಲಯದ ಪರಿಸರವನ್ನು ಶುಚಿಯಾಗಿಡಲು ಸಹಕರಿಸಿ.
 16. ಸದ್ಯಸರು ಪುಸ್ತಕಗಳನ್ನು ಉಪಯೋಗಿಸಿದ ಮೇಲೆ ಡೆಸ್ಕ್ ಮೇಲೆ ಸರಿಯಾಗಿ ಇಟ್ಟು ಹೋಗೋವುದು.
 17. ಗ್ರಂಥಾಲಯದ ಸದ್ಯಸರು ತಮ್ಮ ನೊಂದಣಿಯನ್ನು ತಮ್ಮ ಹಳೆಯ ಪುಸ್ತಕ ತೆಗೆದುಕೊಳ್ಳುವ ಟಿಕೆಟ್ ಗಳನ್ನು ವಾಪಸ್ ಕೊಡುವ ಮೂಲಕ ನವೀಕರಿಸಿಕೊಳಬೇಕು.
 18. ಗ್ರಂಥಾಲಯದ ಭದ್ರತಾ ಸಿಬ್ಬಂದಿಗಳು ಕೇಳಿದಾಗ ಸದ್ಯಸರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಹಕರಿಸಬೇಕು.
 19. ಓದುಗರು ತಮಗೆ ಏನಾದರೂ ತೊಂದರೆಗಳಿದ್ದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರ ನೆರವನ್ನು ಪಡೆಯಬಹುದು.
 20. ಓದುಗರ ಸಹಕಾರವನ್ನು ಕೋರಲಾಗಿದೆ.