ಮೈಸೂರು ವಿಶ್ವವಿದ್ಯಾನಿಲಯವು ಜುಲೈ 27, 1916 ರಂದು ಸ್ಥಾಪನೆಯಾಯಿತು. ಇದು ಭಾರತ ದೇಶದ ಆರನೇಯ ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾನಿಲಯ. ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾನಿಲಯ. ಉದಾರವಾದಿ ಹಾಗೂ ದೂರದೃಷ್ಟಿಯುಳ್ಳ ಅಂದಿನ ಮಹಾರಾಜ ಸನ್ಮಾನ್ಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಹಾಗೂ ಅಂದಿನ ದಿವಾನ ಶ್ರೀ. ಸರ್. ಎಂ. ವಿಶ್ವೇಶ್ವರಯ್ಯ(1860-1962)ರ ಪ್ರಯತ್ನದ ಫಲ ಇದು.
ಹೆಚ್ಚು ಓದಲುಭಾರತದ ವಿಶ್ವವಿದ್ಯಾನಿಲಯಗಳ ಪೈಕಿ, ಮೈಸೂರು ವಿಶ್ವವಿದ್ಯಾನಿಲಯವು ಕಳೆದೊಂದು ಶತಮಾನದಿಂದಲೂ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸುತ್ತಾ ಬಂದಿದೆ. ನೂತನ ಅಧ್ಯಯನ ವಿಷಯಗಳು ಹಾಗೂ ಜ್ಞಾನಶಿಸ್ತುಗಳ ಅಳವಡಿಕೆ ಮತ್ತು ಹೊಸ ಪ್ರಯತ್ನಗಳ ... ...