ಮುದ್ರಣ ಸಂಪನ್ಮೂಲಗಳು

ಗ್ರಂಥಾಲಯ ಸಂಗ್ರಹಣೆಗಳು

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯವು ಹಲವಾರು ಪುಸ್ತಕಗಳನ್ನು, ಜರ್ನಲ್ ಗಳನ್ನು, ರಿಪೋರ್ಟ್ಸ, ಥೀಸಿಸ್, ಈ-ಜರ್ನಲ್, ಸಿಡಿ-ರೋಮ್, ಡೇಟಾಬೇಸ್, ಇನ್ನಿತರ ವಸ್ತುಗಳನ್ನು, ಸುದ್ದಿ ಪತ್ರಿಕೆ ಹಾಗೂ ವಾರ, ಮಾಸಿಕ ನಿಯತಕಾಲಿಕ ಪತ್ರಿಕೆಗಳನ್ನು, ಸರ್ಕಾರಿ ಅನುದಾನದ ಮೂಲಕ, ಹಾಗೂ ಯುಜಿಸಿ ಅನುದಾನದ ಇತರೆ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ಹಾಗೂ ವೆಬ್ ಒಪಾಕ್ ಗಳ ಮೂಲಕ ತರಿಸಿಕೊಂಡು ಸಂಗ್ರಹಿಸಿ ಇಟ್ಟುಕೊಳ್ಳುತ್ತಾ ಬಂದಿದೆ.


ಡಾಕ್ಯುಮೆಂಟ್ಗಳ ರೀತಿ  ಸಂಖ್ಯಾ ಪ್ರಮಾಣ
 ಪುಸ್ತಕಗಳು 9,87,836
 ನಿಯತಕಾಲಿಕಗಳು (ಬೌಂಡ್ ಜರ್ನಲ್ಸ್ ಸೇರಿ) 1,24,000
 ಉಲ್ಲೇಖ ಮತ್ತು ಆರ್ಕೈವಲ್ ಮೆಟೀರಿಯಲ್ಸ್ 18,615
 ಪ್ರಬಂಧಗಳು ಹಾಗೂ ವಿಘಟನೆಗಳು 7,000+
 ಒಟ್ಟು ಇರುವ ಭಾರತೀಯ ಜರ್ನಲ್ ಗಳು 109
 ಈ - ಜರ್ನಲ್ 9,300 +
 ಡಾಟಾಬೇಸ್ಸ್ 06
Braille Books 1250
Audio CD's 3,247
 ಸಿಡಿ ರೊಮ್ಸ್
 [ಸಿಲ್ವರ್ ಪ್ಲಾಟರ್ಸ್ ಸಬ್ಜೆಕ್ಟ್-ವೈಸ್, ಮಲ್ಟಿಮೀಡಿಯಾ + ಟೆಕ್ಸ್ಟ್ ಬುಕ್ಸ್]
250
 ಮೈಕ್ರೋ ಫಾರಂ

255

 ಮೈಕ್ರೋ ಫೀಸೆಚೇ 10
 ಆಡಿಯೋ ಕ್ಯಾಸೆಟ್ಸ್ 26

ವಿಡಿಯೋ ಕ್ಯಾಸೆಟ್ಸ್ 250
 E-Books 24,399

ಚಟುವಟಿಕೆಗಳು

ಗ್ರಂಥಾಲಯವು ನಿಯಮಿತವಾಗಿ ಈ ಕೆಳಕಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ.

  1. ಗ್ರಂಥಾಲಯ ಬಳಕೆದಾರರಿಗೆ ಜಾಗೃತಿ ಹಾಗೂ ಕಲಿಕಾ ಕಾರ್ಯಕ್ರಮ
  2. ಹೊಸ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ
  3. ಮಹನೀಯರ ಹಾಗೂ ಚರಿತ್ರೆ ಪುಸ್ತಕಗಳ ಪ್ರದರ್ಶನ
  4. ಹೊಸ ಪುಸ್ತಕಗಳ ಹಾಗೂ ಉಡುಗೊರೆ ರೂಪದಲ್ಲಿ ಗ್ರಂಥಾಲಯಕ್ಕೆ ಬಂದ ಪುಸ್ತಕಗಳ ಪುಸ್ತಕ ಪ್ರದರ್ಶನ
  5. ಗ್ರಂಥಾಲಯಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡುವಿಕೆ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಗಣಕೀಕ್ರತಗೊಳಿಸಿರುವ ಬಗ್ಗೆ

ಗ್ರಂಥಾಲಯವು 18 ನೇ ಮತ್ತು 19 ನೇ ಶತಮಾನಗಳ ಹಿಂದೆಯೇ ಅತ್ಯಂತ ವಿಶಿಷ್ಟವಾದ ಮತ್ತು ಪ್ರಶಸ್ತವಾದ ದಾಖಲೆಗಳನ್ನು ಹೊಂದಿದೆ. ಈ ದಾಖಲೆಗಳನ್ನು ಕಾಲದವರೆಗೆ ಉಳಿಸಿಕೊಳ್ಳಲು ಮತ್ತು ಸಂರಕ್ಷಿಸುವ ಸಲುವಾಗಿ, ಈ ಪ್ರಮುಖ ಐತಿಹಾಸಿಕ ಮತ್ತು ಆರ್ಕೈವಲ್ ದಾಖಲೆಗಳನ್ನು ಗಣಕೀಕ್ರತಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ

ಪ್ರಕಟಣೆಗಳು

ಗ್ರಂಥಾಲಯವು ಅವಾಗವಾಗ ಹೊಸ ಪುಸ್ತಕಗಳ ಆಗಮನದ ಪಟ್ಟಿಯನ್ನು ಮುದ್ರಣ ಮಾಧ್ಯಮದ ಮೂಲಕ ಹಾಗೂ ಸಿಡಿ ಮೂಲಕ ಬಿಡುಗಡೆ ಮಾಡುತ್ತಾ ಬಂದಿದೆ. ಲೈಬ್ರರಿ ಗೈಡ್ ಬುಕ್ಸ್ ಹಾಗೂ ಬ್ರೌಚರ್ ಆಫ್ ಲೈಬ್ರರಿಯನ್ನು ಸಹ ಬಿಡುಗಡೆಗೊಳಿಸಿದೆ.