|
ಗ್ರಂಥಾಲಯದ ನಿಯಮಾವಳಿಗಳು
- ಗ್ರಂಥಾಲಯದ ಸದ್ಯಸರು ಗ್ರಂಥಾಲಯದ ನಿಯಮಾವಳಿಗಳನ್ನು ಗ್ರಂಥಾಲಯದ ಪರಿಣಾಮಕಾರಿ ಆಡಳಿತಕ್ಕಾಗಿ ಹಾಗೂ ಉತ್ತಮ ಕಾರ್ಯನಿರ್ವಹಣೆಗಾಗಿ ಪಾಲಿಸತಕ್ಕದು.
- ಪಿಜಿ ಕೋರ್ಸ್ / ಪಿಜಿ ಡಿಪ್ಲೋಮ ಹಾಗು ಸರ್ಟಿಫಿಕೇಟ್ ಕೋರ್ಸ್ ಗಳ ವಿದ್ಯಾರ್ಥಿಗಳು ಪುಸ್ತಕ ಪಡೆಯಲು ಗ್ರಂಥಾಲಯದ ಸದ್ಯಸತ್ವಕ್ಕಾಗಿ ಅರ್ಜಿ ಸಲ್ಲಿಸಿ ಕಡಾಯವಾಗಿ ಗ್ರಂಥಾಲಯದ ಸದ್ಯಸತ್ವ ಪಡೆದಿರಬೇಕು.
- ಸದ್ಯಸರು ಗ್ರಂಥಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ಸದ್ಯಸ್ವತ ದಾಖಲಾತಿಗಳನ್ನು ಕಡಾಯವಾಗಿ ತಂದಿರಬೇಕು.
- ಸದ್ಯಸರು ಗ್ರಂಥಾಲಯದ ಪುಸ್ತಕಗಳನ್ನು ಇರಿಸಲಾದ ಪ್ರದೇಶಕ್ಕೆ ಭೇಟಿ ನೀಡುವಾಗ ತಮ್ಮ ಕೈಚೀಲ ಹಾಗೂ ಇತರೆ ವಸ್ತುಗಳನ್ನು ಕಡ್ಡಾಯವಾಗಿ ಗ್ರಂಥಾಲಯದ ಭದ್ರತಾ ಕೌಂಟರ್ ನಲ್ಲಿ ಇಟ್ಟು, ಟೋಕನ್ ಕೇಳಿ ಪಡೆದುಕೊಳತಕ್ಕದು.
- ಓದುಗರು ಗ್ರಂಥಾಲಯಕ್ಕೆ ಬರುವಾಗ ಯಾವುದೇ ಬೆಲೆಬಾಳುವ / ದುಬಾರಿ ವಸ್ತುಗಳನ್ನು ಅಂದರೆ, ಆಭರಣಗಳು, ಹಣ, ಮೊಬೈಲ್ಗಳು ಮತ್ತು ಯಾವುದೇ ಇತರ ಉಪಕರಣಗಳನ್ನು ತರಬಾರದು.
- ಭದ್ರತಾ ಕೌಂಟರ್ನಲ್ಲಿರುವ ಸಿಬ್ಬಂದಿಗೆ ಸದಸ್ಯತ್ವ ID ಕಾರ್ಡ್ ಅನ್ನು ಪರಿಶೀಲಿಸಲು ಅನುಮತಿಯಿರುತ್ತದೆ.
- ಎಲ್ಲ ಓದುಗರು ಕಡ್ಡಾಯವಾಗಿ ತಮ್ಮ ಸಹಿಯನ್ನು ಸೆಕ್ಯೂರಿಟಿ ಡೆಸ್ಕ್ ನಲ್ಲಿ ಇರಿಸಲಾದ ಹಾಜರಾತಿ ಪುಸ್ತಕದಲ್ಲಿ ಮಾಡಬೇಕು.
- ಸದ್ಯಸರು ಗ್ರಂಥಾಲಯದ ಆವರಣದಲ್ಲಿ ತಮ್ಮ ಸ್ವಂತ ಪುಸ್ತಕಗಳನ್ನು, ಜರ್ನಲ್ಸ್ ಹಾಗೂ ಇತರ ಇಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ತರುವುದನ್ನು ನಿಷೇದಿಸಲಾಗಿದೆ.
- ಓದುಗರು ಮಾತನಾಡುವಾಗ ಕಡಿಮೆ ಧ್ವನಿಯಲ್ಲಿ ಮಾತನಾಡಲು ಗ್ರಂಥಾಲಯವು ವಿನಂತಿಸಿಕೊಳುತ್ತದೆ.
- ಓದುಗರು ಪುಸ್ತಕದ ಹಾಳೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುವಾಗ ಮಡಚಬಾರದು ಎಂದು ಗ್ರಂಥಾಲಯವು ಮನವಿ ಮಾಡಿಕೊಳ್ಳುತ್ತದೆ.
- ಗ್ರಂಥಾಲಯ ಸದ್ಯಸರು ಗ್ರಂಥಾಲಯದ ಒಳಗೆ ಇರುವಾಗ ಮೊಬೈಲ್ / ಟ್ಯಾಬ್ಲೇಟ್ಸ್ ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬೇಕು.
- ಗ್ರಂಥಾಲಯ ಸದ್ಯಸರು ಗ್ರಂಥಾಲಯದ ಒಳಗೆ ಇರುವಾಗ ಕಸವನ್ನು ಕಂಡಕಂಡಲ್ಲಿ ಎಸೆಯಬಾರದು. ಕಸವನ್ನು ಆಯಾಯ ಸ್ಥಳಗಳಲ್ಲಿ ಇರಿಸಲಾದ ಕಸದ ತೊಟ್ಟಿಯಲ್ಲಿ ಹಾಕಬೇಕು.
- ಗ್ರಂಥಾಲಯ ಸದ್ಯಸರು ಗ್ರಂಥಾಲಯದಲ್ಲಿರುವ ಪುಸ್ತಕದ ಹಾಳೆಗಳನ್ನು ಹರಿಯಬಾರದು. ಹಾಗೊಂದು ವೇಳೆ ಆ ಪುಟದ ಮಾಹಿತಿ ಬೇಕಿದ್ದರೆ, ಆ ಪುಟವನ್ನು ಜೆರಾಕ್ಸ್ ಮಾಡಿಸಿಕೊಳ್ಳತ್ತಕ್ಕದ್ದು.
- ಗ್ರಂಥಾಲಯದ ಜೋಡಿಸಿಟ್ಟ ದಾಖಲೆ, ಪುಸ್ತಕಗಳನ್ನು ಎಲ್ಲಿ-ಎಲ್ಲಿಯೋ ಇಡಬೇಡಿ. ನೋಡಿ, ಓದಿ ಅಥವಾ ಜೆರಾಕ್ಸ್ ಮಾಡಿದ ನಂತರ ಮತ್ತೆ ಅದೇ ಜಾಗದಲ್ಲಿ ಸರಿಯಾಗಿ ಜೋಡಿಸಿಡಿ.
- ಗ್ರಂಥಾಲಯದ ಪರಿಸರವನ್ನು ಶುಚಿಯಾಗಿಡಲು ಸಹಕರಿಸಿ.
- ಸದ್ಯಸರು ಪುಸ್ತಕಗಳನ್ನು ಉಪಯೋಗಿಸಿದ ಮೇಲೆ ಡೆಸ್ಕ್ ಮೇಲೆ ಸರಿಯಾಗಿ ಇಟ್ಟು ಹೋಗೋವುದು.
- ಗ್ರಂಥಾಲಯದ ಸದ್ಯಸರು ತಮ್ಮ ನೊಂದಣಿಯನ್ನು ತಮ್ಮ ಹಳೆಯ ಪುಸ್ತಕ ತೆಗೆದುಕೊಳ್ಳುವ ಟಿಕೆಟ್ ಗಳನ್ನು ವಾಪಸ್ ಕೊಡುವ ಮೂಲಕ ನವೀಕರಿಸಿಕೊಳಬೇಕು.
- ಗ್ರಂಥಾಲಯದ ಭದ್ರತಾ ಸಿಬ್ಬಂದಿಗಳು ಕೇಳಿದಾಗ ಸದ್ಯಸರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಸಹಕರಿಸಬೇಕು.
- ಓದುಗರು ತಮಗೆ ಏನಾದರೂ ತೊಂದರೆಗಳಿದ್ದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರ ನೆರವನ್ನು ಪಡೆಯಬಹುದು.
- ಓದುಗರ ಸಹಕಾರವನ್ನು ಕೋರಲಾಗಿದೆ.
|