ದೈಹಿಕ ಶಿಕ್ಷಣ ವಿಭಾಗ

ದೈಹಿಕ ಶಿಕ್ಷಣ ವಿಭಾಗವು 1928ನೇ ಇಸವಿಯಲ್ಲಿ ಮೈ.ವಿ.ವಿಯಲ್ಲಿ ಪ್ರಾರಂಭವಾಯಿತು. ಈ ವಿಭಾಗವು ವಿ.ವಿ ಅಧೀನ ಕಾಲೇಜುಗಳು, ಸಂಯೋಜಿತ ಕಾಲೇಜುಗಳು, ಸ್ನಾತಕ/ಸ್ನಾತಕೋತ್ತರ ವಿಭಾಗಗಳು ಮತ್ತು ಕೇಂದ್ರಗಳಲ್ಲಿ  ಕ್ರೀಡಾಸಕ್ತಿಯನ್ನು ಉತ್ತೇಜಿಸುವ, ಉತ್ತಮ ಕ್ರೀಡಾ ಪಟುಗಳನ್ನು ರೂಪಿಸುವ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 

 

ಈ ಕೆಳಕಂಡ ಕಾರ್ಯಗಳನ್ನು ದೈಹಿಕ ಶಿಕ್ಷಣ ವಿಭಾಗವು ನಿರ್ವಹಿಸುತ್ತಲಿದೆ


ಅ) ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳಿಗೆ ಕ್ರೀಡಾ ತಂಡಗಳನ್ನು ಪ್ರಾಯೋಜಿಸುವುದು.
ಆ) ವಿದ್ಯಾರ್ಥಿ ಕ್ರೀಡಾಪಟುಗಳನ್ನು ಅಂತರಕಾಲೇಜು, ಅಂತರ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ತರಬೇತಿ ನೀಡುವುದು.
ಇ) ವಿವಿಧ ಅಂತರ ಕಾಲೇಜು ಸ್ಪರ್ಧೆಗಳನ್ನು ಸಂಘಟಿಸಿ ನಡೆಸುವುದು.
ಈ) ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗಳನ್ನು ಸಂಘಟಿಸಿ ನಡೆಸುವುದು.
ಉ) ಕ್ರೀಡಾಪಟುಗಳಿಗೆ / ಕ್ರೀಡಾಧಿಕಾರಿಗಳಿಗೆ ಸನ್ಮಾನ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವುದು.
ಊ) ಕ್ರೀಡಾ ಸೌಲಭ್ಯಗಳ ಸಂರಕ್ಷಣೆ, ನಿರ್ವಹಣೆ, ಕಾಪಾಡುವಿಕೆ ಹಾಗೂ ಸೌಲಭ್ಯಗಳನ್ನು ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಮತ್ತು ಸಾರ್ವಜನಿಕರ ಉಪಯೋಗಕ್ಕೆ ನೀಡುವುದು.
ಋ) ದೈಹಿಕ ಶಿಕ್ಷಣ ವಿಭಾಗ, ಸಂಯೋಜಿತ ಕಾಲೇಜುಗಳ ದೈಹಿಕ ಶಿಕ್ಷಣ ವೃಂದಕ್ಕೆ ವೃತ್ತಿಗೆ ಸಂಬಂಧಿಸಿದ ವಿಷಯಕ್ಕೆ ಹೆಚ್ಚಿನ ಪರಿಣಿತಿ ಮತ್ತು ಜ್ಞಾನವೃದ್ಧಿಗಾಗಿ ಕಾರ್ಯಾಗಾರ/ ಸಮ್ಮೇಳನಗಳನ್ನು ನಡೆಸುವುದು.
ಎ) ಸಂಯೋಜಿತ ಕಾಲೇಜುಗಳ ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮತ್ತು ಕ್ರೀಡೆಗಳ ತರಬೇತಿ ನೀಡುವುದು.
ಏ) ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ಅವಧಿಯಲ್ಲಿ ತರಬೇತಿ ನೀಡುವುದು.
ಐ) ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ಇತರ ವಿಶ್ವವಿದ್ಯಾನಿಲಯಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಲು ಸಹಾಯ ನೀಡುವುದು.
ವಿಭಾಗದ ನುರಿತ, ಅನುಭವಿ ತರಬೇತುದಾರರು ಮತ್ತು ದೈಹಿಕ ಶಿಕ್ಷಣ ವೃಂದದಿಂದ ಹಾಗೂ ವಿಶ್ವವಿದ್ಯಾನಿಲಯ ಆಡಳಿತದ ಸಹಕಾರದೊಂದಿಗೆ ಮೇಲ್ಕಂಡ ಎಲ್ಲ ಕಾರ್ಯಗಳ ಸಂಕ್ಷಿಪ್ತ ವಿವರಣೆ.

ಅ) ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳಿಗೆ ಕ್ರೀಡಾ ತಂಡಗಳನ್ನು ಪ್ರಾಯೋಜಿಸುವುದು ವಿಶ್ವವಿದ್ಯಾನಿಲಯ ತಂಡಕ್ಕೆ ವಿವಿಧ ಕ್ರೀಡೆಗಳಲ್ಲಿ ಆಯ್ಕೆಯಾದ ಮತ್ತು ಪ್ರತಿಭೆ ಹೊಂದಿರುವ ಕ್ರೀಡಾಪಟುಗಳನ್ನು ಆಯಾ ಸಾಲಿನ, ದಕ್ಷಿಣವಲಯ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿ ಪ್ರಾಯೋಜಿಸಲಾಯಿತು.


ಆ) ವಿದ್ಯಾರ್ಥಿ ಕ್ರೀಡಾಪಟುಗಳನ್ನು ಅಂತರ ಕಾಲೇಜು, ಅಂತರ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ತರಬೇತಿ ನೀಡುವುದು.  ಅನುಭವಿ ತರಬೇತುದಾರರಿಂದ 10 ರಿಂದ 12 ದಿನಗಳ ಅವಧಿಯ ತರಬೇತಿ ಶಿಬಿರಗಳನ್ನು ಅಂತರ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗೆ ತೆರಳಲು ಆಯ್ಕೆಯಾದ ಕ್ರೀಡಾಪಟುಗಳಿಗೆ ಇಲಾಖೆಯ ಮತ್ತು ಯುವ ಸಬಿಲಿಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಮತ್ತು ಇತರ ಸಂಸ್ಥೆಗಳ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗೂ ಆಸಕ್ತಿಯಿಂದ ಪ್ರತಿನಿತ್ಯ ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳಿಗೆ ವರ್ಷಪೂರ್ತಿ ತರಬೇತಿ ನೀಡುವುದಲ್ಲದೆ, ಕ್ರೀಡಾಪಟುಗಳಿಗೆ ದೈಹಿಕ ಸಾಮಥ್ರ್ಯದ ತರಬೇತಿ ನೀಡಿ, ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸುವುದರ ಮುಖಾಂತರ ಉತ್ತಮ ಪ್ರದರ್ಶನ ನೀಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ಅಣಿಗೊಳಿಸಲಾಗುವುದು.

 

ಇ) ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗಳನ್ನು ಸಂಘಟಿಸಿ ನಡೆಸುವುದು


ಈ) ವಿವಿಧ ಅಂತರ ಕಾಲೇಜು ಸ್ಪರ್ಧೆಗಳನ್ನು ಸಂಘಟಿಸಿ ನಡೆಸುವುದು ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪಂದ್ಯಾವಳಿಗಳ ಪುರುಷರ 15 ಮತ್ತು ಮಹಿಳೆಯರ 06 ಸ್ಪರ್ಧೆಗಳನ್ನು 5 ವಲಯಗಳ ಮಟ್ಟದಲ್ಲಿ ಅಂದರೆ ಚಾಮುಂಡಿ ವಲಯ (ಮೈಸೂರು ಜಿಲ್ಲೆ), ಚಾಮರಾಜ ವಲಯ (ಚಾಮರಾಜನಗರ ಜಿಲ್ಲೆ), ಮಾಂಡವ್ಯ ವಲಯ (ಮಂಡ್ಯ ಜಿಲ್ಲೆ), ಮಲೆನಾಡು ವಲಯ (ಹಾಸನ ಜಿಲ್ಲೆ) ಮತ್ತು ಕೃಷ್ಣರಾಜ ವಲಯ (ಮೈಸೂರು ಗ್ರಾಮಾಂತರ)ಗಳಲ್ಲಿ ನಡೆಸಲಾಯಿತು ಹಾಗೂ ವಲಯಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ತಂಡಗಳು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಂತರ ವಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತದೆ. ಪುರಷರ ಅಂತರ ಕಾಲೇಜು ಅಂತರ ವಲಯ ಪಂದ್ಯಾವಳಿಯನ್ನು ಎರಡು ಗುಂಪುಗಳಾಗಿ ವಿಂಗಂಡಿಸಿ (ಗ್ರೂಪ್1-ಗ್ರೂಪ್2) ಮತ್ತು ಮಹಿಳೆಯರ ಅಂತರಕಾಲೇಜು ಅಂತರ ವಲಯ ಪಂದ್ಯಾವಳಿಯನ್ನು ತಲಾ 15 ಕ್ರೀಡೆಗಳಲ್ಲಿ ನಡೆಸಲಾಗುವುದು.


ಉ) ಕ್ರೀಡಾಪಟುಗಳಿಗೆ / ಕ್ರೀಡಾಧಿಕಾರಿಗಳಿಗೆ ಸನ್ಮಾನ ಮತ್ತು ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹಿಸುವುದು ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಸಲುವಾಗಿ ನುರಿತ ಹಾಗೂ ಅನುಭವಿ ತರಬೇತುದಾರರು ಮತ್ತು ದೈಹಿಕ ಶಿಕ್ಷಣ ವೃಂದದಿಂದ ಲಭ್ಯವಿರುವ ಉತ್ತಮ ಗುಣಮಟ್ಟದ ಕ್ರೀಡಾ ಸಲಕರಣೆಗಳ ಉಪಯೋಗದೊಂದಿಗೆ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆಗಳಿಸಲು ಸಹಕಾರಿಯಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾ ವಿದ್ಯಾರ್ಥಿ ವೇತನವನ್ನು 75 ವಿದ್ಯಾರ್ಥಿಗಳಿಗೆ ತಲಾ ರೂ 3,000/-ರಂತೆ ನೀಡಲಾಗುತ್ತಿದೆ.


ಊ) ಕ್ರೀಡಾ ಸೌಲಭ್ಯಗಳ ಸಂರಕ್ಷಣೆ, ಕಾಪಾಡುವಿಕೆ ಹಾಗೂ ಸೌಲಭ್ಯಗಳನ್ನು ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಮತ್ತು ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ಕ್ರೀಡಾ ಸೌಲಭ್ಯಗಳಾದ ವಿವಿದ್ದೋದ್ದೇಶ ಒಳಾಂಗಣ ಕ್ರೀಡಾಂಗಣ (ಜಿಮ್ನೆಸಿóಯಮ್ ಹಾಲ್), ಈಜುಕೊಳ, ಅಥ್ಲೆಟಿಕ್ಸ್ ಸಿಂಡರ್ ಟ್ರ್ಯಾಕ್, ವಿವಿಧ ಹೊರಾಂಗಣ ಆಟದ ಅಂಕಣಗಳು / ಮೈದಾನಗಳು, ಮಹಾರಾಜ ಕಾಲೇಜು ಆವರಣದಲ್ಲಿರುವ ಟೆನ್ನಿಸ್ ಅಂಕಣಗಳು ಮತ್ತು ಮಾನಸಗಂಗೋತ್ರಿಯಲ್ಲಿನ ಆಟದ ಮೈದಾನಗಳನ್ನು ಅಣಿಗೊಳಿಸಿ ಸುವ್ಯವಸ್ಥೆಯಿಂದ ಕಾಪಾಡಿಕೊಂಡು ಸಂರಕ್ಷಿಸಿ ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಮತ್ತು ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಲು ಅವಕಾಶ ನೀಡುತ್ತಿದೆ.  ದೈಹಿಕ ಶಿಕ್ಷಣ ವಿಭಾಗವು ಓವಲ್ ಮೈದಾನದ ಉನ್ನತ್ತೀಕರಣದ ಸಲುವಾಗಿ ಚೈನ್‍ಲಿಂಕ್ ಬೇಲಿಯನ್ನು ನಿರ್ಮಿಸಿ ಪಾದಚಾರಿಗಳಿಗಾಗಿ ವಾಕಿಂಗ್ ಪಾತ್, ಟ್ರ್ಯಾಕ್ ಸುತ್ತ ಬಾಕ್ಸ್ ಡ್ರೈನ್, ಶೌಚಾಲಯಗಳು, ನೀರಿನ ಸಂಪು, ಓವರ್‍ಹೆಡ್ ಟ್ಯಾಂಕ್, ಬೋರ್ವೆಲ್, ಸ್ಪ್ರಿಂಕ್ಲರ್ ಮತ್ತು ಹಾಳಾಗಿರುವ ಸಿಂಡರ್ ಟ್ರಾಕ್ ದುರಸ್ತಿಗೊಳಿಸುವ ಕಾರ್ಯವನ್ನು ರೂ. 1,10 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗಿದೆ.

ನೂತನ ಯೋಜನೆಗಳು:-

• ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳವು ನೂತನವಾಗಿ ನವೀಕರಣಗೊಂಡಿದ್ದು, ರೂ. 1,50,00,000 ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿರುವ ಕುಳಿತುಕೊಳ್ಳುವ ವ್ಯವಸ್ಥೆಗಾಗಿ ಗ್ಯಾಲರಿ, ಶೌಚಲಯಗಳು, ಸ್ನಾನದ ಗೃಹಗಳು ಹಾಗೂ ಈಜುಕೊಳದ ಸಿಬ್ಬಂದಿಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯಗಳುಳ್ಳ ಕೊಠಡಿಗಳನ್ನು ನಿರ್ಮಿಸಲಾಗಿದ್ದು, 50ಮೀಟರ್ ಉದ್ದದ ಈಜುಕೊಳವನ್ನು ನವೀಕರಣಗೊಳಿಸಿ ಮಾರ್ಚ್ ತಿಂಗಳಿನಿಂದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ತೆರಲಾಯಿತು.


• ಪ್ರಸ್ತುತ ವಿಭಾಗದ ಸ್ಪೋಟ್ರ್ಸ್ ಪೆವಿಲಿಯನ್ ಆವರಣದಲ್ಲಿರುವ ಕ್ರೀಡಾಪಟುಗಳ ವಸತಿ ಸಮುಚ್ಚಯದ ಹೆಚ್ಚುವರಿ ಡಾರ್ಮೆಟರಿಗಳು ಮತ್ತು ಯೋಗ ಕೇಂದ್ರದ ಕಾಮಗಾರಿಗಾಗಿ ರೂ. ಒಂದು ಕೋಟಿ ವೆಚ್ಚದ ಕಾರ್ಯಯೋಜನೆ ರೂಪಿಸಲಾಗಿದೆ.


ಋ) ದೈಹಿಕ ಶಿಕ್ಷಣ ವಿಭಾಗ, ಸಂಯೋಜಿತ ಕಾಲೇಜುಗಳ ದೈಹಿಕ ಶಿಕ್ಷಣ ವೃಂದಕ್ಕೆ ವೃತ್ತಿಗೆ ಸಂಬಂಧಿಸಿದ ವಿಷಯಕ್ಕೆ ಹೆಚ್ಚಿನ ಪರಿಣತಿ ಮತ್ತು ಜ್ಞಾನವೃದ್ಧಿಗಾಗಿ ಕಾರ್ಯಾಗಾರ / ಸಮ್ಮೇಳನಗಳನ್ನು ನಡೆಸುವುದು ದೈಹಿಕ ಶಿಕ್ಷಣ ವಿಭಾಗವು ಸಂಯೋಜಿತ ಕಾಲೇಜುಗಳ ಸಹಯೋಗದೊಂದಿಗೆ ಈ ಕೆಳಕಂಡ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. “ದೈಹಿಕ ಶಿಕ್ಷಣ ವಿಭಾಗವು ಪ್ರತೀ ವರ್ಷ ಪ್ರೊ. ಶೇಷಣ್ಣ ದತ್ತಿನಿಧಿಯ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.


ಎ)ಸಂಯೋಜಿತ ಕಾಲೇಜುಗಳ ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮತ್ತು ಕ್ರೀಡೆಗಳ ತರಬೇತಿ ನೀಡುವುದು ವಿವಿಧ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕ್ರೀಡೆಗಳ ಬಗ್ಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡುವುದಲ್ಲದೆ, ಅಂತರ ಕಾಲೇಜು, ಮತ್ತು ಇತರ ಸ್ಪರ್ಧೆಗಳು / ಆಯ್ಕೆಗಳಲ್ಲಿ ಭಾಗವಹಿಸಲು ಅಗತ್ಯವಿರುವ ಮಾರ್ಗದರ್ಶನ ಮತ್ತು ಸಹಾಯವನ್ನು ಇಲಾಖೆಯಲ್ಲಿರುವ ತರಬೇತುದಾರರಿಂದ ನೀಡಲಾಗುತ್ತಿದೆ.

ಏ) ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಲ್ಲಿ ಬೇಸಿಗೆ ಅವಧಿಯಲ್ಲಿ ತರಬೇತಿ ನೀಡುವುದು ಕಳೆದ ಇಪ್ಪತ್ತೈದು ವರ್ಷಗಳಿಂದ ದೈಹಿಕ ಶಿಕ್ಷಣ ವಿಭಾಗವು ಬೇಸಿಗೆ ತರಬೇತಿ ಶಿಬಿರಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜನೆಗೊಳಿಸಿದ್ದು, ಶಿಬಿರದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಲ್ಲಿ ಅಡಗಿರುವ ಪ್ರತಿಭೆ, ದೈಹಿಕ ಸಾಮಥ್ರ್ಯ, ದೈಹಿಕ ಶಿಕ್ಷಣದ ಅರಿವು ಮೂಡಿಸಿ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಲುವಾಗಿ 15 ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುತ್ತಿರುವುದರಿಂದ ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವುದು ಗಮನಾರ್ಹ.


ಐ) ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ಇತರ ವಿಶ್ವವಿದ್ಯಾನಿಲಯಗಳಿಗೆ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಲು ಸಹಾಯ ನೀಡುವುದು
ವಿವಿಧ ಇಲಾಖೆಗಳಾದ, ಪ್ರೌಢಶಿಕ್ಷಣ, ಪದವಿಪೂರ್ವಶಿಕ್ಷಣ, ಯುವÀ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಖಾಸಗಿ ಸಂಘಸಂಸ್ಥೆಗಳು ಮುಂತಾದವುಗಳಿಗೆ ವಿಭಾಗದಲ್ಲಿರುವ ಅನುಭವಿ ಅಧಿಕಾರಿಗಳ ಸೇವೆಯನ್ನು ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಿ ನಡೆಸಲು ಸಹಕಾರ ನೀಡಲಾಗುತ್ತಿದೆ.

 

ಪ್ರತಿ ಸಾಲಿನಲ್ಲಿ ವಿಶ್ವವಿದ್ಯಾನಿಲಯವು ಸಂಘಟಿಸಲಿರುವ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪಂದ್ಯಾವಳಿಗಳ ವಿವರ:

 

1.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ಹಾಗೂ ಮಹಿಳಾ ಗುಡ್ಡಗಾಡು ಓಟದ ಸ್ಪರ್ಧೆ ಹಾಗೂ ಆಯ್ಕೆ ಪ್ರಕ್ರಿಯೆ 

2.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚೀಫ್ ಜಸ್ಟೀಸ್ ಹೊಂಬೇಗೌಡ ಸ್ಮಾರಕ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯಾವಳಿ

3.     ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ಹಾಗೂ ಮಹಿಳಾ, ಯೋಗಾಸನ ಜಿಮ್ನಾಸ್ಟಿಕ್ಸ್ ಮತ್ತು ಕುಸ್ತಿ ಹಾಗೂ ಪುರುಷರ ಭಾರ ಎತ್ತುವ ಸ್ಪರ್ಧೆ, ಉತ್ತಮ ದೇಹದಾಢ್ರ್ಯ ಸ್ಪರ್ಧೆಗಳು ಮತ್ತು ಆಯ್ಕೆ ಪ್ರಕ್ರಿಯೆ

4.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಥ್ಲೆಟಿಕ್ಸ್ (ಪುರುಷರ ಮತ್ತು ಮಹಿಳಾ) ಸ್ಪರ್ಧೆಗಳು ಹಾಗೂ ಆಯ್ಕೆ ಪ್ರಕ್ರಿಯೆ

5.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಂತರವಲಯ ಮಹಿಳಾ ಪಂದ್ಯಾವಳಿ

6.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಂತರವಲಯ ಪುರುಷರ ಪಂದ್ಯಾವಳಿ ಗುಂಪು-1

7.ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಂತರವಲಯ ಪುರುಷರ ಪಂದ್ಯಾವಳಿ ಗುಂಪು-2