See also 2axis
1axis ಆಕ್ಸಿಸ್‍
ನಾಮವಾಚಕ
(ಬಹುವಚನ axes, ಉಚ್ಚಾರಣೆ ಆಕ್ಸೀ).

ಅಕ್ಷ:

  1. ಒಂದು ಕಾಯವು ಯಾವ ಸರಳರೇಖೆಯ ಸುತ್ತಲೂ ಸುತ್ತುತ್ತಿರುವುದೋ ಯಾ ಸುತ್ತುತ್ತಿರುವುದೆಂದು ಊಹಿಸಬಹುದೋ ಆ ರೇಖೆ.
  2. ನಿರ್ದೇಶಾಂಕ ಮೊದಲಾದವುಗಳನ್ನು ಅಳೆಯಲು ಆಧಾರವಾಗಿಟ್ಟುಕೊಳ್ಳುವ ಸ್ಥಿರ ರೇಖೆ.
  3. (ಸಸ್ಯವಿಜ್ಞಾನ) ಪುಷ್ಪಗುಚ್ಛ ಯಾ ಇತರ ಬೆಳವಣಿಗೆ ಯ ಮಧ್ಯದ ಸ್ತಂಭಾಕೃತಿಯ ಅಂಗ.
  4. (ಅಂಗರಚನಾಶಾಸ್ತ್ರ) ಕುತ್ತಿಗೆಯ ಅಸ್ಥಿಪಂಜರದಲ್ಲಿ ಎರಡನೆಯ ಕಶೇರುಕ.
  5. (ರಾಜ್ಯಶಾಸ್ತ್ರ ಮೊದಲಾದವು) ಕೂಟ; ನಿರ್ದಿಷ್ಟ ಉದ್ೇಶಕ್ಕಾಗಿ ಎರಡು ಯಾ ಹೆಚ್ಚು ರಾಷ್ಟ್ರಗಳು ಪರಸ್ಪರ ಮಾಡಿಕೊಂಡ ಒಪ್ಪಂದ, ಮೈತ್ರಿ.
ಪದಗುಚ್ಛ

the Axis (ಚರಿತ್ರೆ) ಜರ್ಮನಿ ಮತ್ತು ಇಟಲಿಯ 1939ರ ಒಪ್ಪಂದ (ಅನಂತರ ಈ ಒಪ್ಪಂದದಲ್ಲಿ ಜಪಾನ್‍ ಮತ್ತಿತರ ರಾಷ್ಟ್ರಗಳೂ ಸೇರಿಕೊಂಡವು).

See also 1axis
2axis ಆಕ್ಸಿಸ್‍
ನಾಮವಾಚಕ

ದಕ್ಷಿಣ ಏಷ್ಯಾದ ಬಿಳಿ ಚುಕ್ಕೆಯ ಜಿಂಕೆ.