See also 2away  3away
1away ಅವೇ
ಕ್ರಿಯಾವಿಶೇಷಣ
  1. (ಒಂದು ಸ್ಥಳ, ವ್ಯಕ್ತಿ, ಪದಾರ್ಥ, ಮೊದಲಾದವುಗಳಿಂದ) ದೂರದಲ್ಲಿ; ಆಚೆಗೆ: go away ತೊಲಗು; ದೂರ ಹೋಗು. throw it away ಆಚೆಗೆ ಯಾ ದೂರ ಎಸೆ. away back ಹಿಂದೆ ದೂರದಲ್ಲಿ. away from the subject ವಿಷಯದಿಂದ ದೂರವಾಗಿ.
  2. ಜತೆಗೆ; ಅದೇ ದಾರಿಯಲ್ಲಿ: come away death ಸಾವೇ ಜತೆಗೆ ಬಾ.
  3. ಒತ್ತಟ್ಟಿಗೆ; ಬದಿಗೆ; ಬೇರೆಡೆಗೆ; ಬೇರೆ ದಿಕ್ಕಿಗೆ: lay it away ಅದನ್ನು ಒತ್ತಟ್ಟಿಗಿಡು. look away ಬೇರೆಡೆ ನೋಡು.
  4. ಬರದೆ ಹೋಗುವಂತೆ; ಅದೃಶ್ಯವಾಗುವಂತೆ; ನಾಶವಾಗುವಂತೆ: the sound faded away ಶಬ್ದ ಕ್ಷಯಿಸಿ ಹೋಯಿತು. the snow melted away ಹಿಮಕರಗಿ ಹೋಯಿತು. waste away ನಶಿಸಿ ಹೋಗು.
  5. ಪೂರ್ತಿಯಾಗಿ; ನಿಶ್ಶೇಷವಾಗಿ; ಚೂರೂ ಬಿಡದೆ: he gave it away ಆತ ಅದನ್ನು ಪೂರ್ತಿಯಾಗಿ ಕೊಟ್ಟುಬಿಟ್ಟ.
  6. ಎಡೆಬಿಡದೆ; ಒಂದೇ ಸಮನೆ; ಸಂತತವಾಗಿ; ನಿರಂತರವಾಗಿ: laughing away ಒಂದೇ ಸಮನೆ ನಗುತ್ತ.
  7. ಒಡನೆಯೇ; ಕೂಡಲೆ; ತತ್‍ಕ್ಷಣ: the troops were ordered to fire away ಒಡನೆಯೇ ಗುಂಡು ಹಾರಿಸಲು ಸೈನ್ಯಕ್ಕೆ ಆಜ್ಞೆ ಮಾಡಲಾಯಿತು.
ನುಡಿಗಟ್ಟು
  1. away with
    1. ಹೊರಟು ಹೋಗು; ತೊಲಗು.
    2. ತೆಗೆದುಕೊಂಡು ಹೋಗು.
  2. do away with
    1. ಮುಗಿಸಿ ಬಿಡು; ತೊಡೆದು ಬಿಡು; ಪರಿಹರಿಸು; ತೀರಿಸಿ ಬಿಡು; ನಿಲ್ಲಿಸಿ ಬಿಡು.
    2. ಕೊಂದುಬಿಡು.
  3. explain away ಸಬೂಬು ಹೇಳಿಬಿಡು; ಕುಂಟುಯುಕ್ತಿಯಿಂದ ಬಚಾವಾಗು ಯಾ ಬಚಾಯಿಸು; ನಂಬುವಂಥ ಕಾರಣ ಯಾ ವಿವರಣೆ ನೀಡಿ ತಪ್ಪಿಸಿಕೊ.
  4. fall away from ಕೈ ಬಿಡು; ಬಿಟ್ಟೋಡು.
  5. $^1$far and away.
  6. fire away ಮುಂದುವರಿ; ಆರಂಭಿಸು.
  7. fool away ಅವಿವೇಕದಿಂದ ಹಾಳುಮಾಡು, ಪೋಲು ಮಾಡು.
  8. get away with it (ಆಡುಮಾತು) ತೊಂದರೆಗೊಳಗಾಗದೆ ದಾಟಿಸಿ ಬಿಡು; ಬಚಾಯಿಸಿಕೊ; ದಕ್ಕಿಸಿಕೊ.
  9. make away with
    1. ಹಾರಿಸಿಕೊಂಡು ಹೋಗು; ಲಪಟಾಯಿಸು.
    2. ನಾಶಮಾಡು.
  10. once and away ಯಾವಾಗಲೋ ಒಮ್ಮೆ, ಒಂದು ಸಲ, ಒಂದು ಬಾರಿ.
  11. out and away ಎಣೆಯಿಲ್ಲದೆ; ಸಾಟಿಯಿಲ್ಲದೆ; ಅಸದೃಶವಾಗಿ.
  12. $^1$put away.
  13. $^1$right away.
  14. $^3$straight away.
  15. turn away ವಿಮುಖನಾಗು.
See also 1away  3away
2away ಅವೇ
ಗುಣವಾಚಕ

ಪರಾಂಗಣದ; ಎದುರಾಳಿ ನೆಲದ(ಲ್ಲಿ ಆಡಿದ); ಪ್ರತಿಕಕ್ಷಿಯ ಮೈದಾನದಲ್ಲಿ ಯಾ ಕ್ರೀಡಾಂಗಣದಲ್ಲಿ ಆಡಿದ: away win ಪರಾಂಗಣದ ಜಯ.

See also 1away  2away
3away ಅವೇ
ನಾಮವಾಚಕ

ಎದುರಾಳಿ ನೆಲದಲ್ಲಿ ಆಡಿದ ಪಂದ್ಯ ಯಾ ಗೆಲುವು; ಪರಾಂಗಣ ಪಂದ್ಯ ಯಾ ಗೆಲುವು.