automatism ಆಟಾಮಟಿಸಮ್‍
ನಾಮವಾಚಕ
  1. ಅನೈಚ್ಛಿಕ ವ್ಯಾಪಾರ; ಸಂಕಲ್ಪರಹಿತ ಕ್ರಿಯೆ; ಅರಿವಿಲ್ಲದೆ ನಡೆಯುವ ರೂಢಿಯ ಕೆಲಸ.
  2. ಸ್ವಯಂಚಲನ; ತನ್ನಷ್ಟಕ್ಕೆ ತಾನೇ ನಡೆಯುವಿಕೆ.
  3. (ತತ್ತ್ವಶಾಸ್ತ್ರ) ಶರೀರವಾದ; ಸ್ವಭಾವವಾದ; ಮನುಷ್ಯ ಮತ್ತು ಪ್ರಾಣಿಗಳ ವರ್ತನೆಗೆ ಶರೀರ ಧರ್ಮವೇ ಕಾರಣ, ಬುದ್ಧಿಯಲ್ಲ ಎಂಬ ವಾದ.
  4. (ಶರೀರ ವಿಜ್ಞಾನ) ಅಯತ್ನ ಕ್ರಿಯೆ; ಅಪ್ೇರಿತ ಕ್ರಿಯೆ; ಅನುದ್ದಿಷ್ಟ ಕ್ರಿಯೆ.
  5. (ಮನಶ್ಶಾಸ್ತ್ರ) ಅಪ್ರಜ್ಞಾಕ್ರಿಯೆ; ಅರಿವಿಲ್ಲದ ವರ್ತನೆ; ನಿಸ್ಸಂಕಲ್ಪಿತ ಕ್ರಿಯೆ; ಪ್ರಜ್ಞಾರಹಿತ ಕ್ರಿಯೆ.
  6. (ಸರಿಯಲಿಸ್ಟ್‍ ಪಂಥದಲ್ಲಿ) ಸುಪ್ತ ಪ್ರಜ್ಞಾಭಿವ್ಯಕ್ತಿ; ಅನಿಯಂತ್ರಿತ ಯಾ ಅವಿವೇಚಿತ ಪ್ರತಿಮೆಗಳ ಮೂಲಕ ಸುಪ್ತಪ್ರಜ್ಞೆ ಅಭಿವ್ಯಕ್ತಿ ಪಡೆಯಲು ಅವಕಾಶ ನೀಡುವ ಕ್ರಿಯೆ ಯಾ ಸಿದ್ಧಾಂತ.