aunt ಆನ್ಟ್‍
ನಾಮವಾಚಕ
  1. ಸೋದರತ್ತೆ; ತಂದೆಯ ಸಹೋದರಿ.
  2. ಚಿಕ್ಕಮ್ಮ ಯಾ ದೊಡ್ಡಮ್ಮ.
  3. (ಆಡುಮಾತು) ಅತ್ತೆ; ಸಂಬಂಧಿಯಾಗಿರದಿದ್ದರೂ ಮಕ್ಕಳಿಗೆ ಪ್ರಿಯಳಾದ ಯಾವುದೇ ವಯಸ್ಸಿನ ಹೆಂಗಸು.
ಪದಗುಚ್ಛ

Aunt Sally

  1. ಹೆಣ್ಣು ಬೊಂಬೆಯ ಬಾಯಲ್ಲಿ ಚುಂಗಾಣಿಯಿಟ್ಟು ದೂರದಿಂದ ಕೋಲನ್ನೆಸೆದು ಅದನ್ನು ಒಡೆಯುವ ಒಂದು ಬಗೆಯ ಸ್ಪರ್ಧೆ.
  2. (ರೂಪಕವಾಗಿ) ಬಲಿಪಶು; ನೆಪದ ಹೋತ; ಅನ್ಯಾಯವಾದ ಖಂಡನೆಗೆ ಗುರಿಯಾದ ವ್ಯಕ್ತಿ ಯಾ ವಸ್ತು.