See also 2augur
1augur ಆಗರ್‍
ನಾಮವಾಚಕ
  1. (ಪ್ರಾಚೀನ ರೋಮ್‍ನ) ಶಕುನಿಗ; ನೈಮಿತ್ತಿಕ; ಭವಿಷ್ಯವಾದಿ; ಹಕ್ಕಿಗಳ ಚಲನವಲನ ಮೊದಲಾದವನ್ನು ಗಮನಿಸಿ ಮುಂದಾಗುವುದನ್ನು ಭವಿಷ್ಯ ನುಡಿಯುತ್ತಿದ್ದ ಪ್ರಾಚೀನ ರೋಮ್‍ನ ಧಾರ್ಮಿಕ ಅಧಿಕಾರಿ.
  2. ಶಕುನಿಗ; ಕಣಿಗಾರ; ದೈವಙ್ಞ; ಭವಿಷ್ಯವಾದಿ.
See also 1augur
2augur ಆಗರ್‍
ಸಕರ್ಮಕ ಕ್ರಿಯಾಪದ
  1. ಕಣಿ ಹೇಳು; ಶಕುನ ಹೇಳು; ನಿಮಿತ್ತ ಹೇಳು.
  2. ಮುನ್ನರುಹು; ಭವಿಷ್ಯ ನುಡಿ; ಮುನ್ಸೂಚಿಸು.
ಅಕರ್ಮಕ ಕ್ರಿಯಾಪದ
  1. (ಶಕುನ, ಮುನ್ಸೂಚನೆ, ಮೊದಲಾದವುಗಳಿಂದ) ಊಹಿಸು; ಭವಿಷ್ಯ ಹೇಳು; ನಿರೀಕ್ಷಿಸು: she augurs on the least pretext ಸ್ವಲ್ಪ ನೆಪ ಸಿಕ್ಕಿದರೂ ಸಾಕು, ಅವಳು ಭವಿಷ್ಯ ಹೇಳುತ್ತಾಳೆ.
  2. ಶಕುನವಾಗಿರು; ಮುನ್ಸೂಚನೆಯಾಗಿರು.
ನುಡಿಗಟ್ಟು
  1. to augur ill ಅಪಶಕುನವಾಗು; ದುಶ್ಶಕುನವಾಗಿರು.
  2. to augur well ಶುಭಶಕುನವಾಗು; ಶುಭಶಕುನವಾಗಿರು.