See also 2audition
1audition ಆಡಿಷನ್‍
ನಾಮವಾಚಕ
  1. ಕೇಳ್ಮೆ; ಶ್ರವಣ; ಆಲಿಸುವಿಕೆ.
  2. ಕಿವಿಶಕ್ತಿ; ಶ್ರವಣಶಕ್ತಿ.
  3. ಶ್ರವಣಪರೀಕ್ಷೆ; ಪರೀಕ್ಷಾಶ್ರವಣ; ಗಾಯಕ, ವಾಚಕ, ನಟ, ಮೊದಲಾದವರನ್ನು ನೇಮಿಸಿಕೊಳ್ಳುವಾಗ ಅವರ ಧ್ವನಿಯನ್ನು ಪರೀಕ್ಷಿಸುವುದು.
  4. ದರ್ಶನ ಪರೀಕ್ಷೆ; ಪರೀಕ್ಷಾದರ್ಶನ; ನಟ, ನರ್ತಕ, ಮೊದಲಾದವರನ್ನು ನೇಮಿಸಿಕೊಳ್ಳುವಾಗ ಅವರ ಅಭಿನಯವನ್ನು ಪರೀಕ್ಷಿಸುವುದು.
See also 1audition
2audition ಆಡಿಷನ್‍
ಸಕರ್ಮಕ ಕ್ರಿಯಾಪದ
  1. ಕೇಳಿ ಪರೀಕ್ಷಿಸು; ಪರೀಕ್ಷಾಶ್ರವಣ ಮಾಡು; ಶ್ರವಣಪರೀಕ್ಷೆ ಮಾಡು; ಗಾಯನ, ಭಾಷಣ, ವಾಚನ, ಮೊದಲಾದವನ್ನು ಮಾಡಿಸಿ ಪರೀಕ್ಷಿಸು.
  2. ನೋಡಿ ಪರೀಕ್ಷಿಸು; ದರ್ಶನ ಪರೀಕ್ಷೆ ಮಾಡು; ನಟ, ನರ್ತಕ, ಮೊದಲಾದವರಿಂದ ಅಭಿನಯ ಮಾಡಿಸಿ ಪರೀಕ್ಷಿಸು.
ಅಕರ್ಮಕ ಕ್ರಿಯಾಪದ

ಶ್ರವಣಪರೀಕ್ಷೆಗೆ ಒಳಗಾಗು.

  1. ದರ್ಶನ ಪರೀಕ್ಷೆಗೆ ಒಳಗಾಗು.