See also 2attributive
1attributive ಅಟ್ರಿಬ್ಯೂಟಿವ್‍
ಗುಣವಾಚಕ
  1. ಆರೋಪಿಸುವ.
  2. ವಿಶೇಷಣದ; ವಿಶೇಷಣದಂತಿರುವ.
  3. (ವ್ಯಾಕರಣ) ( ಗುಣವಾಚಕ ಯಾ ನಾಮವಾಚಕಗಳ ವಿಷಯದಲ್ಲಿ) ಗುಣವನ್ನು ಯಾ ವಿಶೇಷವನ್ನು ಸೂಚಿಸುವ; ಕ್ರಿಯಾಪದದ ಮೂಲಕ ನಾಮವಾಚಕವನ್ನು ವಿಶೇಷಿಸದೆ, ನೇರವಾಗಿ ಅದನ್ನು ವಿಶೇಷಿಸುವ: the cat is black ಎಂಬಲ್ಲಿನ black ನಂತಲ್ಲದೆ, black cat ಎಂಬಲ್ಲಿನ black ನಂತೆ ಇರುವ.
See also 1attributive
2attributive ಅಟ್ರಿಬ್ಯೂಟಿವ್‍
ನಾಮವಾಚಕ

ನಾಮವಿಶೇಷಣದ; ಕ್ರಿಯಾಪದದ ಮೂಲಕ ಆಗಿರದೆ, ಅಂದರೆ ಆಖ್ಯಾತ ಗುಣವಾಚಕವಾಗಿರದೆ, ನೇರವಾಗಿ ನಾಮವಾಚಕವನ್ನು ವಿಶೇಷಿಸುವ ಪದ.

ಪದಗುಚ್ಛ

attributive adjective = 2attributive.