See also 2attribute
1attribute ಆಟ್ರಿಬ್ಯೂಟ್‍
ನಾಮವಾಚಕ
  1. ಗುಣ; ಲಕ್ಷಣ; ವೈಶಿಷ್ಟ್ಯ; ವಿಶೇಷ ಲಕ್ಷಣ.
  2. (ವ್ಯಕ್ತಿಗೆ ಯಾ ಪದವಿಗೆ ಉಚಿತವಾದ) ಉಪಾಧಿ; ಗುರುತು; ಚಿಹ್ನೆ; ಲಾಂಛನ.
  3. (ವ್ಯಾಕರಣ) ವಿಶೇಷಣ; ಗುಣವಾಚಕ.
  4. (ತರ್ಕಶಾಸ್ತ್ರ) (ವಿಷಯವನ್ನು ಕುರಿತು ಹೇಳಿದ) ಅಸ್ತ್ಯರ್ಥವಾಚಕ ಯಾ ನಿಷೇಧಾರ್ಥವಾಚಕ.
See also 1attribute
2attribute ಅಟ್ರಿಬ್ಯೂಟ್‍
ಸಕರ್ಮಕ ಕ್ರಿಯಾಪದ
  1. ಆರೋಪಿಸು; (ಗ್ರಂಥಕರ್ತ, ಕಾಲ, ದೇಶ, ಮೊದಲಾದವುಗಳಿಗೆ) ಸೇರಿದ್ದೆನ್ನು: is attributed to Sakespeare ಷೇಕ್ಸ್‍ಪಿಯರನದು ಎನ್ನಲಾಗಿದೆ.
  2. ಕಾರಣವೆನ್ನು; ಕಾರಣ ಹೇಳು; ಪರಿಣಾಮವೆನ್ನು; ಫಲವೆನ್ನು: attributes his success to hard work ತನ್ನ ಯಶಸ್ಸಿಗೆ ಕಠಿಣ ಶ್ರಮ ಕಾರಣವೆನ್ನುತ್ತಾನೆ.