attraction ಅಟ್ರಾಕ್‍ಷನ್‍
ನಾಮವಾಚಕ
  1. ಆಕರ್ಷಣೆ:
    1. ಆಕರ್ಷಿಸುವುದು; ಸೆಳೆಯುವುದು; ಸೆಳೆತ (ರೂಪಕವಾಗಿ ಸಹ).
    2. ಎಳಕುಳಿ; ಆಕರ್ಷಿಸುವ ಶಕ್ತಿ (ರೂಪಕವಾಗಿ ಸಹ).
    3. (ಭೌತವಿಜ್ಞಾನ) ಆಕರ್ಷಕತ್ವ; ಪದಾರ್ಥಗಳು ಪರಸ್ಪರ ಸೆಳೆಯುವ ಯಾ ಹತ್ತಿರ ಬರುವ ಪ್ರವೃತ್ತಿ.
  2. ಆಕರ್ಷಕ ವಸ್ತು.
  3. (ರೂಪಕವಾಗಿ) ಆಕರ್ಷಕ ಯಾ ಮೋಹಕ ವ್ಯಕ್ತಿ, ಗುಣ, ಮೊದಲಾದವು.
  4. (ವ್ಯಾಕರಣ) ಪರಿಸರಾಕರ್ಷಣೆ; ಪರಿಸರ ಸೆಳೆತ; ಪಕ್ಕದ ಪದದ ತಪ್ಪುರೂಪಕ್ಕೆ ಯಾ ಪ್ರಯೋಗಕ್ಕೆ ಕಾರಣವಾದ, ಅದರ ಪರಿಸರದಲ್ಲಿರುವ ಪದದ ಪ್ರಭಾವ: neither of the books were sold ಎಂಬ ವಾಕ್ಯದಲ್ಲಿ neither ಎಂಬ ಕರ್ತೃಪದಕ್ಕೆ ಅನುಗುಣವಾಗಿ was ಎಂದು ಏಕವಚನದಲ್ಲಿರಬೇಕಾಗಿದ್ದ ಕ್ರಿಯಾಪದವು ಅದರ ಪಕ್ಕದಲ್ಲಿರುವ books ಎಂಬ ನಾಮಪದಕ್ಕೆ ಅನುಗುಣವಾಗಿ ಬಹುವಚನದಲ್ಲಿ ತಪ್ಪಾಗಿ ಪ್ರಯೋಗವಾಗಿದೆ.