attorney ಅಟರ್ನಿ
ನಾಮವಾಚಕ
  1. (ಅಮೆರಿಕನ್‍ ಪ್ರಯೋಗ) ವಕೀಲ; ನ್ಯಾಯವಾದಿ; ಲಾಯರು; ಬ್ಯಾರಿಸ್ಟರು.
  2. ಮೊಕ್ತಿಯಾರಿ; ಕಾರ್ಯಭಾರಿ; ವ್ಯವಹಾರ ಪ್ರತಿನಿಧಿ; ವ್ಯಾಪಾರದಲ್ಲೋ ನ್ಯಾಯವಿಚಾರದಲ್ಲೋ ಕೋರ್ಟಿನ ಹೊರಗೆ ಒಬ್ಬನ ಪರವಾಗಿ ವ್ಯವಹಾರ ನಡೆಸಲು ಅಧಿಕೃತನಾದ ಕಾರ್ಯಕರ್ತ.
  3. = district attorney.
ಪದಗುಚ್ಛ
  1. abuse the plaintiff’s attorney ಫಿರ್ಯಾದಿಯ ವಕೀಲರನ್ನು ಬಯ್ಯಿ (ದುರ್ಬಲವಾದ ಖಟ್ಲೆಯನ್ನು ವಹಿಸಿಕೊಂಡ ವಕೀಲನಿಗೆ ವ್ಯಂಗ್ಯವಾಗಿ ಹೇಳುವ ಮಾತು).
  2. letter of attorney ಅಧಿಕಾರ ಪತ್ರ; ವಕಾಲತ್ತು ನಾಮೆ; ವ್ಯಕ್ತಿಯ ಪರವಾಗಿ ವ್ಯವಹಾರ ಮೊದಲಾದವನ್ನು ನಡೆಸಲು ಕಾನೂನು ರೀತ್ಯಾ ಬರೆದುಕೊಟ್ಟ ಪತ್ರ.
  3. power of attorney ಮೊಖ್ಕ್ಯಾರುನಾಮೆ; ವಕಾಲತ್ತು; ವ್ಯವಹಾರ ನಡೆಸಲು ಅಧಿಕಾರ; ವ್ಯವಹಾರಾಧಿಕಾರ.