attitude ಆಟಿಟ್ಯೂಡ್‍
ನಾಮವಾಚಕ
  1. (ಕಾರ್ಯವನ್ನೋ ಭಾವವನ್ನೋ ಸೂಚಿಸುವ) ಶರೀರ ವಿನ್ಯಾಸ; ದೇಹ ವಿನ್ಯಾಸ; ದೇಹದ – ರೀತಿ, ಭಂಗಿ: a threatening attitude ಹೆದರಿಸುವ ಭಂಗಿ.
  2. (ಚಿತ್ರ, ಶಿಲ್ಪ, ನೃತ್ಯದಲ್ಲಿ ದೇಹದ) ನಿಲವು; ಭಾವಭಂಗಿ; ಅಂಗ ವಿನ್ಯಾಸ.
  3. (ಅಭಿಪ್ರಾಯ, ಸ್ವಭಾವ, ಮೊದಲಾದವನ್ನು ಸೂಚಿಸುವ) ವರ್ತನೆ; ನಡೆನುಡಿಯ – ರೀತಿ, ಕ್ರಮ, ಬಗೆ, ಭಾವ, ಭಂಗಿ: a friendly attitude ಸ್ನೇಹಭಾವ; ಅಭಿಪ್ರಾಯ; ದೃಷ್ಟಿ.
  4. ವಿಮಾನದ ಚಲನೆಯ ದಿಕ್ಕಿಗೆ ಸಂಬಂಧಿಸಿದಂತೆ ವಿಮಾನದ ಯಾ ಅದರ ರೆಕ್ಕೆಯ ಸ್ಥಾನ.
ನುಡಿಗಟ್ಟು
  1. atitxtude (of mind) ನಿಷ್ಕೃಷ್ಟ ಆಲೋಚನಾ ರೀತಿ; ಖಚಿತ ಅಭಿಪ್ರಾಯ.
  2. strike an attitude ನಾಟಕೀಯ – ನಿಲುವಿನಲ್ಲಿ ನಿಲ್ಲು, ಭಂಗಿಯಲ್ಲಿ ನಿಲ್ಲು; ನಟನಂತೆ ನಿಲ್ಲು.