attend ಅಟೆಂಡ್‍
ಸಕರ್ಮಕ ಕ್ರಿಯಾಪದ
  1. ಹಾಜರಿರು; ಇರು; ಉಪಸ್ಥಿತನಾಗಿರು.
  2. ಒಂದಿಗಿರು; ಜೊತೆಗಿರು; ಸಂಗಡ ಇರು; ಒಡನೆಯೇ ಬರು.
  3. ಆರೈಕೆ ಮಾಡು; ಶುಶ್ರೂಷೆ ಮಾಡು; ಉಪಚರಿಸು; ಸೇವೆ ಮಾಡು: the nurse attended the patient ರೋಗಿಯನ್ನು ದಾದಿ ಉಪಚರಿಸಿದಳು.
  4. (ಮರ್ಯಾದೆಗಾಗಿ) ಜೊತೆಗೆ ಹೋಗು; ಹಿಂದೆ ನಡೆ; ಅನುಸರಿಸು.
  5. ನೋಡಿಕೊ; ಕಾದುಕೊ; ಎಚ್ಚರವಹಿಸು: attend to your health ನಿನ್ನ ಆರೋಗ್ಯವನ್ನು ನೋಡಿಕೊ.
  6. ಕೇಳು; ಗಮನಿಸು; ಮನಸ್ಸು ಕೊಡು.
  7. (ಸ್ಕೂಲು, ಚರ್ಚು, ಮೊದಲಾದವುಗಳಿಗೆ) ನಿಯಮಿತವಾಗಿ, ತಪ್ಪದೆ – ಹೋಗು.
  8. (ಒಂದರ) ಫಲವಾಗಿರು; ಪರಿಣಾಮವಾಗಿ ಬರು; ಅನುಸರಿಸಿ: the risks attending this method ಈ ವಿಧಾನದ ಪರಿಣಾಮವಾಗಿ ಬರುವ ಯಾ ಈ ವಿಧಾನವನ್ನು ಅನುಸರಿಸಿ ಬರುವ ಅಪಾಯಗಳು.
ಅಕರ್ಮಕ ಕ್ರಿಯಾಪದ
  1. ಮನಸ್ಸು ಕೊಡು; ಗಮನಿಸು.
  2. ಹಾಜರಿರು; ಉಪಸ್ಥಿತವಾಗಿರು.
  3. ಜೊತೆಗಿರು; ಒಡನಿರು.
  4. ನೋಡಿಕೊ; ಉಪಚರಿಸು: attend to a sick person ರೋಗಿಯನ್ನು ನೋಡಿಕೊ.
  5. ತೊಡಗಿಸಿಕೊ: attend oneself to work ಕೆಲಸಕ್ಕೆ ತೊಡಗಿಸಿಕೊ.
  6. ಫಲವಾಗಿ, ಪರಿಣಾಮವಾಗಿ ಬರು.