See also 2attack
1attack ಅಟ್ಯಾಕ್‍
ಸಕರ್ಮಕ ಕ್ರಿಯಾಪದ
  1. ಆಕ್ರಮಣ ಮಾಡು; ಮೇಲೆ ಬೀಳು; ಮೇಲೆರಗು; ಹಲ್ಲೆ ಮಾಡು; ಕೈ ಮಾಡು.
  2. ಯುದ್ಧ ಪ್ರಾರಂಭಿಸು.
  3. ಬಯ್ಯು; ದೂಷಿಸು; ಖಂಡಿಸು; ಕಟು ವಿಮರ್ಶೆಗೆ ಗುರಿ ಮಾಡು.
  4. ನಾಶ ಮಾಡಲು ಯಾ ಹಾನಿ ಮಾಡಲು ತೊಡಗು, ಪ್ರಯತ್ನಿಸು: locusts attack the crops ಮಿಡತೆಗಳು ಪೈರನ್ನು ನಾಶ ಮಾಡುತ್ತವೆ.
  5. (ಕಷ್ಟವಾದ ಕೆಲಸಕ್ಕೆ) ಕೈಹಾಕು; (ಹುರುಪಿನಿಂದ ಕೆಲಸ) ಕೈಗೆತ್ತಿಕೊ; (ಕಾರ್ಯಸಾಧನೆಗೆ) ತೊಡಗು.
  6. (ರೋಗ) ತಗಲು; ತಾಗು; ತಟ್ಟು; ಹಿಡಿ.
ಅಕರ್ಮಕ ಕ್ರಿಯಾಪದ
  1. ಆಕ್ರಮಣ ಮಾಡು.
  2. ಯುದ್ಧ ಪ್ರಾರಂಭಿಸು.
See also 1attack
2attack ಅಟ್ಯಾಕ್‍
ನಾಮವಾಚಕ
  1. ಮೇಲೆ ಬೀಳುವಿಕೆ; ಮೇಲೆರಗುವಿಕೆ; ಆಕ್ರಮಣ; ಹಲ್ಲೆ.
  2. ಕದನಾರಂಭ.
  3. (ರೋಗ ಮೊದಲಾದವುಗಳ) ಹಠಾತ್‍ ತಗುಲಿಕೆ; ಅಡಸುವಿಕೆ; ಆಘಾತ: heart attack ಹೃದಯಾಘಾತ.
  4. (ಮುಖ್ಯವಾಗಿ ಕಷ್ಟಸಾಧ್ಯವಾದ ಕೆಲಸದ) ಕಾರ್ಯಾರಂಭ.
  5. (ಪಂದ್ಯ, ಸ್ಪರ್ಧೆಯಲ್ಲಿ) ಹುರುಪಿನ ಪ್ರಾರಂಭ; ಬಿರುಸಿನ ಪ್ರಾರಂಭ.
  6. ಬಿರು ಬಯ್ಗುಳ; ಖಂಡನೆ; ದೂಷಣೆ.
  7. (ಸಂಗೀತ) ಎತ್ತುಗಡೆ; ಕೃತಿಯನ್ನು ಹಾಡಲು ಯಾ ನುಡಿಸಲು ಆರಂಭಿಸುವುದು ಯಾ ಆರಂಭಿಸುವ ರೀತಿ, ವೈಖರಿ.
  8. (ನೆಟ್‍ಬಾಲ್‍, ಲಕ್ರಾಸ್‍, ಮೊದಲಾದ ಆಟಗಳಲ್ಲಿ) ಮುಂಚೂಣಿ – ಆಟಗಾರ, ಹೊಡೆತಗಾರ; ಮುಂದುಗಡೆಯಲ್ಲಿರುವ, ಮುನ್‍ಸಾಲಿನಲ್ಲಿರುವ ಆಟಗಾರ.