atmosphere ಆಟ್ಮಸಿಅರ್‍
ನಾಮವಾಚಕ
  1. ವಾಯುಮಂಡಲ; (ಭೂಮಿಯನ್ನು ಸುತ್ತಿಕೊಂಡಿರುವ) ಅನಿಲಾವರಣ.
  2. (ಯಾವುದೇ ಪ್ರದೇಶದ) ವಾಯುಮಂಡಲ; ಪ್ರಾದೇಶಿಕ ವಾತಾವರಣ.
  3. (ಖಗೋಳ ವಿಜ್ಞಾನ) ಆಕಾಶಕಾಯದ (ಸುತ್ತಲಿರುವ) ಅನಿಲಮಂಡಲ.
  4. (ರಸಾಯನವಿಜ್ಞಾನ) (ಯಾವುದೇ) ಅನಿಲದ ಆವರಣ.
  5. (ಬಹುವಚನ) ವಾಯುಭಾರ; ಒಂದು ಚದರ ಸೆಂಟಿಮೀಟರ್‍ಗೆ ಒಂದು ಕಿಲೊಗ್ರಾಂ ಒತ್ತಡ.
  6. (ಭೌದ್ಧಿಕ, ನೈತಿಕ, ಮುಖ್ಯವಾಗಿ ಕಲಾತ್ಮಕ ಯಾ ಭಾವಾತ್ಮಕ) ಪರಿಸರ.
  7. (ಲಲಿತಕಲೆ, ಸಾಹಿತ್ಯದಲ್ಲಿ) ಮುಖ್ಯ ಮನೋಧರ್ಮ; ಭಾವ; ಧಾಟಿ.
  8. (ಯಾವುದೇ ಜಾಗದ) ವಿಶಿಷ್ಟ – ಲಕ್ಷಣ, ಸ್ವರೂಪ, ರೀತಿ, ಪರಿಸ್ಥಿತಿ.
  9. (ಯಾವುದೇ ಪ್ರದೇಶದ) ವಾಯು; ಗಾಳಿ.