atavism ಆಟವಿಸಮ್‍
ನಾಮವಾಚಕ

ಆಟವಿಸಂ:

  1. (ಜೀವವಿಜ್ಞಾನ) ಪ್ರಪೂರ್ವಜ ಸಾದೃಶ್ಯ; ಪ್ರಪೂರ್ವಜಸಾಮ್ಯ; ಪ್ರಪೂರ್ವಜ ಹೋಲಿಕೆ; ತಂದೆತಾಯಿಗಳನ್ನು ಹೋಲದೆ ಅವರಿಗಿಂತ ಬಹಳ ಹಿಂದಿನ ಪೂರ್ವಜರನ್ನು ಹೋಲುವುದು.
  2. (ಜೀವವಿಜ್ಞಾನ) ಮರುಕಳಿಕೆ; ಪುನರುದ್ಭವ; ಪ್ರಪೂರ್ವಜೋದ್ಭವ; ಪ್ರಪೂರ್ವಜ ರೂಪದ ಪ್ರತ್ಯಾವರ್ತನ, ಪುನರಾವರ್ತನ; ಹಿಂದಿನ ತಲೆಮಾರೊಂದರ ಲಕ್ಷಣಗಳು, ನಡುವಣ ತಲೆಮಾರುಗಳಲ್ಲಿ ಕಾಣದಾಗಿದ್ದು ಮತ್ತೆ ಕಾಣಿಸಿಕೊಳ್ಳುವಿಕೆ.
  3. ಪೂರ್ವಪಿತೃರೋಗ (ಪುನರಾವರ್ತನ); ಕೆಲವು ತಲೆಮಾರುಗಳು ಕಳೆದ ನಂತರ ರೋಗ ಮರಳಿ ಕಾಣಿಸಿಕೊಳ್ಳುವುದು.