at ಅಟ್‍, ಯಾ ಅವಧಾರಣೆ ಇರುವಾಗ ಆಟ್‍
ಉಪಸರ್ಗ
  1. (ಸ್ಥಳ ನಿರ್ದೇಶನದಲ್ಲಿ) ಅಲ್ಲಿ; ಮೇಲೆ; ಬಳಿ; ಹತ್ತಿರ: meet at a point ಒಂದೆಡೆ ಸಂಧಿಸು. wait at the corner ಮೂಲೆಯಲ್ಲಿ ಕಾಯಿ. at the top ಮೇಲುಗಡೆ. at school ಶಾಲೆಯಲ್ಲಿ. at Mysore ಮೈಸೂರಿನಲ್ಲಿ.
  2. (ಕಾಲನಿರ್ದೇಶದಲ್ಲಿ)-ಕ್ಕೆ; -ಗೆ; ಅಲ್ಲಿ; ಆಗ: at midday ಮಧ್ಯಾಹ್ನದಲ್ಲಿ.
  3. (ಪ್ರಮಾಣ, ದರ, ಮೊತ್ತ, ಮೊದಲಾದವನ್ನು ಸೂಚಿಸುವಾಗ) ಇಂದ; ಅಂತೆ; ಮೇರೆಗೆ; ಅಲ್ಲಿ: at great speed ಬಲುವೇಗದಿಂದ. at ten rupees a kilo ಕಿಲೋಗೆ ಹತ್ತು ರೂಪಾಯಿನಂತೆ. at one rupee each ತಲಾ ಒಂದು ರೂಪಾಯಿನಂತೆ. at a low price ಕಡಮೆ ಬೆಲೆಯಲ್ಲಿ.
  4. (ಗುರಿ, ಉದ್ೇಶ, ನೆಲೆ, ಮೊದಲಾದವನ್ನು ಸೂಚಿಸುವಾಗ) ಕಡೆಗೆ: aim at the rogue elephant ಮದ್ದಾನೆಯ ಕಡೆಗೆ ಗುರಿಯಿಡು. look at the picture ಚಿತ್ರವನ್ನು ನೋಡು.
  5. (ಯಾವುದೋ ಒಂದರಲ್ಲಿ ನಿರತನಾಗಿರುವುದನ್ನು ಸೂಚಿಸುವಾಗ) ಅಲ್ಲಿ: he is at play ಅವನು ಆಟದಲ್ಲಿ ಇದ್ದಾನೆ.
  6. (ಸ್ಥಿತಿಗತಿ ಸೂಚಿಸುವಾಗ) ಅಲ್ಲಿ; ಇಂದ; ಆಗಿ: at peace ನೆಮ್ಮದಿಯಿಂದ. at ease ಹಾಯಾಗಿ. at leisure ಬಿಡುವಾಗಿ.
  7. (ಸಂದರ್ಭ, ಪರಿಣಾಮ ಸೂಚಿಸುವಾಗ)-ಇಂದ; ಅಲ್ಲಿ; at Easter ಈಸ್ಟರ್‍ ಹಬ್ಬದಲ್ಲಿ. she was annoyed at his stupidity ಅವನ ಪೆದ್ದತನದಿಂದ ಅವಳಿಗೆ ಕಿರಿಕಿರಿಯಾಯಿತು.
  8. (ರೀತಿ, ಕ್ರಮ, ಮೊದಲಾದವನ್ನು ಸೂಚಿಸುವಾಗ)-ಆಗಿ: he spoke at length ಅವನು ದೀರ್ಘವಾಗಿ ಮಾತನಾಡಿದ.
  9. ಅನುಸಾರವಾಗಿ; ಮೇರೆ; ಅಂತೆ; ಆ ಪ್ರಕಾರ: I left the place at his order ಅವನ ಅಪ್ಪಣೆಯಂತೆ ನಾನು ಜಾಗ ಬಿಟ್ಟೆ.
ಪದಗುಚ್ಛ
  1. a child at the breast ಮೊಲೆಯುಣ್ಣುವ ಮಗು.
  2. all at once ಇದ್ದಕ್ಕಿದ್ದಂತೆ; ಫಕ್ಕನೆ; ತಟ್ಟನೆ; ಒಮ್ಮೆಗೆ.
  3. at a disadvantage ತೊಂದರೆಯಲ್ಲಿ; ಅನನುಕೂಲ ಸ್ಥಿತಿಯಲ್ಲಿ.
  4. at a distance ದೂರದಲ್ಲಿ.
  5. at a run ಓಡುತ್ತಾ: came at a run ಓಡುತ್ತಾ ಬಂದ.
  6. at a standstill ಎಲ್ಲವೂ ನಿಂತು ಹೋಗಿ; ಎಲ್ಲವೂ ಸ್ತಬ್ಧವಾಗಿ; ಏನೂ ಜರುಗದೆ.
  7. at dinner ಊಟಮಾಡುತ್ತ; ಊಟದಲ್ಲಿ.
  8. at $^1$ease.
  9. at $^2$first.
  10. at it ಅದರಲ್ಲಿ ತೊಡಗಿ; ಅದನ್ನು ಮಾಡುತ್ತ: I am at it ನಾನು ಅದನ್ನೇ ಮಾಡುತ್ತಿದ್ೇನೆ.
  11. at $^4$last.
  12. at $^2$least.
  13. at $^2$most.
  14. at pleasure ಇಷ್ಟಕಂಡಂತೆ; ಖುಷಿಬಂದಂತೆ.
  15. at random ಅಲ್ಲೊಂದು ಇಲ್ಲೊಂದು.
  16. at short notice ಅಲ್ಪಕಾಲದಲ್ಲಿ; ತ್ವರಿತವಾಗಿ.
  17. at that
    1. ಅಲ್ಲಿಗೇ: leave it at that ಅದನ್ನು ಅಲ್ಲಿಗೇ ಬಿಡು; ಮುಂದಕ್ಕೆ ಮಾಡಬೇಡ.
    2. ಅದರಲ್ಲೂ; ಜೊತೆಗೆ; ಅಷ್ಟೇ ಸಾಲದೆ; ಅದೂ ಅಲ್ಲದೆ; ಹಾಗೆ ನೋಡಿದರೆ: lost in twenty moves, and to an amateur at that ಇಪ್ಪತ್ತು ನಡೆಗಳಲ್ಲಿ ಸೋತುಹೋದ, ಅದರಲ್ಲೂ ಒಬ್ಬ ಅನನುಭವಿಗೆ.
    3. ಅಷ್ಟಾದರೂ; ಆದರೂ: delayed ten minutes but caught the train at that ಹತ್ತು ನಿಮಿಷ ತಡವಾದರೂ ರೈಲು ಸಿಕ್ಕಿತು.
  18. at (the age of) seventy ಎಪ್ಪತ್ತನೆಯ ವಯಸ್ಸಿನಲ್ಲಿ.
  19. at times ಆಗಾಗ; ಕೆಲವೊಮ್ಮೆ; ಒಂದೊಂದು ಸಲ; ಒಮ್ಮೊಮ್ಮೆ.
  20. at $^1$war.
  21. at $^1$work.
  22. get at ಪಡೆ; ಹೊಂದು; ಹಿಡಿ.
  23. good at repartee ಪ್ರತ್ಯುತ್ತರದಲ್ಲಿ ಚತುರ.
  24. impatient at delay ತಡವಾದುದಕ್ಕೆ ಚಡಪಡಿಸಿ.
  25. it is at an end ಅದು ತೀರಿತು, ಕೊನೆಗೊಂಡಿತು.
  26. knock at the door ಕದತಟ್ಟು; ಬಾಗಿಲು ಬಡಿ.
  27. laugh at ಗೇಲಿ ಮಾಡು; ಹಾಸ್ಯ ಮಾಡು; ನೋಡಿ ನಗು.
  28. not at all ಇಲ್ಲವೇ ಇಲ್ಲ; ಸುತರಾಂ ಇಲ್ಲ.
ನುಡಿಗಟ್ಟು
  1. at all events ಏನೇ ಆಗಲಿ.
  2. at a loss to know ಏನೇನೊ ತೋಚದೆ.
  3. at any rate ಏನೇ ಆದರೂ; ಹೇಗಾದರೂ.
  4. at 1arm’s ಲೆ.
  5. at $^3$best.
  6. at daggers drawn ಎದುರಾಳಿಗಳಾಗಿ; ಕತ್ತಿ ಹಿರಿದು.
  7. at $^1$hand.
  8. at $^1$home.
  9. at large ಮನಸ್ವಿ; ಸ್ವತಂತ್ರವಾಗಿ; ಕಟ್ಟುನಿಟ್ಟಿಲ್ಲದೆ; ತಡೆಬಡೆಯಿಲ್ಲದೆ; ಸ್ೇಚ್ಛೆಯಾಗಿ.
  10. at one’s wits’ end ಏನೂ ತೋಚದೆ; ಬುದ್ಧಿ ಓಡದೆ.
  11. at sea ದಿಕ್ಕು ತೋರದೆ; ಕಂಗೆಟ್ಟು; ನೆಲೆತಪ್ಪಿ.
  12. at sight ಕಂಡೊಡನೆ; ನೋಡಿದೊಡನೆ.
  13. at variance
    1. ಹೊಂದಿಕೆಯಿಲ್ಲದೆ; ವ್ಯತ್ಯಾಸವಾಗಿ.
    2. ಭಿನ್ನಾಭಿಪ್ರಾಯ ಹೊಂದಿ.
  14. out at elbows ಬಡತನದಲ್ಲಿ; ದಾರಿದ್ರ್ಯದಿಂದ; ಅಂಗಿಯ ತೋಳು ಹರಿದು; ಹರಕಲು ಬಟ್ಟೆಯಲ್ಲಿ.
  15. play at ಸುಮ್ಮನೆ ಆಟವಾಡು: play at fighting ಯುದ್ಧದ ಆಟವಾಡು.
  16. sick at heart ದುಃಖಿತ; ಹತಾಶ: he was sick at heart ಆತ ದುಃಖಿತನಾಗಿದ್ದ.
  17. what are you at? ನಿನ್ನ ಉದ್ೇಶವೇನು? ನೀನು ಏನು ಮಾಡಬೇಕೆಂದಿದ್ದೀಯೆ?
  18. where it’s at (ಅಶಿಷ್ಟ) ಘಟನೆ ನಿಜವಾಗಿ ನಡೆದ ಸ್ಥಳ.
At
ಸಂಕೇತ

astatine.