asymmetric ಆ(ಏ)ಸಿಮೆಟ್ರಿಕ್‍
ಗುಣವಾಚಕ
  1. ಅಸಮಕೆಲದ; ಅಸಮ ಮಗ್ಗುಲಿಕೆಯ; ಅಸಮಪಾರ್ಶದ; ವಿಷಮಪಾರ್ಶದ; ಎರಡು ಪಾರ್ಶಗಳು ಬಿಂಬ ಪ್ರತಿಬಿಂಬದಂತೆ ಇಲ್ಲದಿರುವ.
  2. (ರಸಾಯನವಿಜ್ಞಾನ) ಅಸಮ್ಮಿತ:
    1. (ಅಣುವಿನ ವಿಷಯದಲ್ಲಿ) ಯಾವ ಬಗೆಯ ಸಮ್ಮಿತಿಯೂ ಇಲ್ಲದಿರುವ.
    2. (ಅಣುವಿನಲ್ಲಿರುವ ಪರಮಾಣುವಿನ ವಿಷಯದಲ್ಲಿ, ಮುಖ್ಯವಾಗಿ ಕಾರ್ಬನ್‍ ಪರಮಾಣುವಿನ ವಿಷಯದಲ್ಲಿ) ಬೇರೆ ಬೇರೆ ಪರಮಾಣು ಯಾ ಪರಮಾಣು ಪುಂಜಗಳನ್ನು ಪಡೆದಿರುವ.