assurance ಅಷುಅರನ್ಸ್‍
ನಾಮವಾಚಕ
  1. (ಕಾನೂನುಬದ್ಧವಾಗಿ) ಭರವಸೆ ಕೊಡುವಿಕೆ.
  2. ನೆಚ್ಚಿಗೆ; ಭರವಸೆ; ನಂಬಿಕೆ ಹುಟ್ಟಿಸುವಂಥದು.
  3. ವಾಗ್ದಾನ; ಮಾತು; ವಚನ; ಪ್ರತಿಜ್ಞೆ; ಅಭಯ; ನಿಜ ಯಾ ನಂಬಬಹುದು ಎಂಬ ದೃಢವಾದ ಹೇಳಿಕೆ.
  4. (ನ್ಯಾಯಶಾಸ್ತ್ರ) ಹಕ್ಕನ್ನು ರಕ್ಷಿಸುವ ಯಾ ಭದ್ರಪಡಿಸುವ ದಸ್ತಾವೇಜು.
  5. (ಬ್ರಿಟಿಷ್‍ ಪ್ರಯೋಗ) ವಿಮೆ.
  6. ಆತ್ಮವಿಶ್ವಾಸ; ಆತ್ಮಪ್ರತ್ಯಯ.
  7. ಕೊಬ್ಬು; ಉದ್ಧಟತನ; ಧಾಷ್ಟ; ಔದ್ಧತ್ಯ.