assonance ಆಸನನ್ಸ್‍
ನಾಮವಾಚಕ
  1. (ಧ್ವನಿವಿಜ್ಞಾನ) ಪ್ರಾಸ; ಎರಡು ಅಕ್ಷರಗಳ ನಡುವಣ ಧ್ವನಿಯ ಸಾಮ್ಯ.
  2. ಪ್ರಾಸ; ಧ್ವನಿಸಾಮ್ಯ; sonnet, porridge ಗಳಲ್ಲಿರುವಂತೆ ವ್ಯಂಜನಗಳಲ್ಲಿ ಬೇರೆಯಾಗಿದ್ದು, ಘಾತಬೀಳುವ ಮೊದಲನೆ ಉಚ್ಚಾರಾಂಶಗಳಲ್ಲಿ ಸಮಾನವಾಗಿರುವ ‘ಂ’ ಸ್ವರದ ಪ್ರಾಸದಂತೆ ಅಥವಾ ಸ್ವರಗಳು ಬೇರೆಯಾಗಿದ್ದು killed, cold ಗಳಲ್ಲಿರುವಂತೆ ವ್ಯಂಜನಗಳು ಸಮಾನವಾಗಿರುವ ‘ಲ್ಡ್‍’ ಪ್ರಾಸದಂತೆ ಎರಡು ಪದಗಳಲ್ಲಿ ಕಂಡು ಬರುವ ಪ್ರಾಸ.
  3. ಸ್ಥೂಲಸಾಮ್ಯ; ಅಲ್ಪಸ್ವಲ್ಪ ಹೋಲಿಕೆ; ಲಘುಸಾದೃಶ್ಯ.