association ಅಸೋಸಿಏಷನ್‍
ನಾಮವಾಚಕ
  1. ಕೂಡಿಕೆ; ಜತೆಗಾರಿಕೆ; ಸಹವಾಸ; ಒಡನಾಟ; ಕೂಟ; ಒಂದು ಸಮಾನ ಉದ್ೇಶಕ್ಕಾಗಿ ಜತೆಗೂಡುವಿಕೆ, ಒಟ್ಟು ಗೂಡುವಿಕೆ.
  2. (ಸಮಾನ ಉದ್ೇಶಕ್ಕಾಗಿ ಒಟ್ಟು ಗೂಡಿದ ಜನರ) ಸಂಘ; ಕೂಟ.
  3. ಮಾನಸಿಕ ಸಂಬಂಧ; ಭಾವಸಾಹಚರ್ಯ: association of ideas ಭಾವಸಾಹಚರ್ಯ; ವಿಷಯಗಳು, ಭಾವನೆಗಳು, ಅನುಭವಗಳು, ನೆನಪುಗಳು, ಮೊದಲಾದವುಗಳಿಗೆ ಪರಸ್ಪರವಾಗಿ ವ್ಯಕ್ತಿಯ ಮನಸ್ಸಿನಲ್ಲಿ ಕಲ್ಪಿತವಾಗುವ ಸಂಬಂಧ.
  4. (ರಸಾಯನವಿಜ್ಞಾನ) (ಅಣು, ಅಯಾನುಗಳ ವಿಷಯದಲ್ಲಿ) ಕೂಟ; ಸಡಿಲವಾಗಿ ಸೇರಿಕೊಳ್ಳುವಿಕೆ.
  5. (ಪರಿಸರವಿಜ್ಞಾನ) ಸಂಬಂಧಿ ಸಸ್ಯಸಮೂಹ; ಒಂದೇ ಸಮನಾದ ಪರಿಸ್ಥಿತಿಗಳಲ್ಲಿರುವ ಮತ್ತು ಒಂದೇ ಸಮನಾದ ಹಾಗೂ ವಿಶಿಷ್ಟ ಲಕ್ಷಣವುಳ್ಳ ಒಂದು ಯಾ ಹಲವು ಜಾತಿಗಳ ಸಸ್ಯಗಳ ಗುಂಪು.
ಪದಗುಚ್ಛ
  1. articles of association ಸಂಘದ ನಿಬಂಧನೆಗಳು; ಸಂಘದ ಅನುಚ್ಛೇದ(ಗಳು); ಲಿಮಿಟೆಡ್‍ ಕಂಪೆನಿಗಳ ನಿಯಮಾವಳಿಗಳ ವಿವರಗಳುಳ್ಳ ಲಿಖಿತ ದಾಖಲೆ.
  2. Association football (ಬ್ರಿಟಿಷ್‍ ಪ್ರಯೋಗ) ಅಸೋಷಿಯೇಷನ್‍ ಫುಟ್‍ಬಾಲ್‍; ಗೋಲ್‍ಕೀಪರ್‍ ವಿನಾ ಮತ್ತೊಬ್ಬರು ಕೈಯಿಂದ ಮುಟ್ಟಕೂಡದ (ದುಂಡು) ಕಾಲ್ಚೆಂಡಾಟ.
  3. deed of association = ಪದಗುಚ್ಛ\((1)\).