1associate ಅಸೋಷಿ(ಸಿ)ಅ(ಏ)ಟ್‍
ಗುಣವಾಚಕ

(ಸ್ನೇಹ, ಕಾರ್ಯ, ಪದವಿ, ಮೊದಲಾದವುಗಳಲ್ಲಿ) ಜತೆಗೂಡಿದ; ಜತೆ ಸೇರಿದ; ಸಂಬಂಧಿಸಿದ.

2associate ಅಸೋಷಿ(ಸಿ)ಅ(ಏ)ಟ್‍
ನಾಮವಾಚಕ
  1. ಜೊತೆಗಾರ; ಸಂಗಾತಿ; ಸಂಗಡಿಗ; ಸಹವಾಸಿ; ಸಹಚರ: ಒಡನಾಡಿ.
  2. ಸಹೋದ್ಯೋಗಿ.
  3. ಪಾಲುದಾರ; (ಒಂದು ಉದ್ಯಮ, ಕಾರ್ಯಾಚರಣೆ, ವ್ಯಾಪಾರ, ಮೊದಲಾದವುಗಳಲ್ಲಿ) ಭಾಗಸ್ಥ.
  4. ಒಂದು ಸಂಸ್ಥೆಯ ಉಪಸದಸ್ಯ ಯಾ ಉಪಾಂಗ.
  5. ಅನುಬಂಧಿ; ಒಂದು ವಸ್ತುವಿನೊಡನೆ ಸೇರಿದ ಇನ್ನೊಂದು ವಸ್ತು.
  6. ಅಸೋಷಿಯೇಟ್‍; (ಫೆಲೋಗಿಂತ ಕೆಳೆದರ್ಜೆಯ) ವಿದ್ವನ್ಮಂಡಲದ, ಅಕಾಡೆಮಿಯ ಸದಸ್ಯ.
3associate ಅಸೋಷಿ(ಸಿ)ಏಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗಳನ್ನು, ವಸ್ತುಗಳನ್ನು ಯಾ ಒಂದರೊಡನೆ ಇನ್ನೊಂದನ್ನು) ಸಂಬಂಧ ಕಲ್ಪಿಸು; ಸಂಯೋಜಿಸು; ಜತೆಗೂಡಿಸು; ಸೇರಿಸು; ಕೂಡಿಸು.
  2. (ಭಾವನೆಯಲ್ಲಿ ಯಾ ಮನಸ್ಸಿನಲ್ಲಿ) ಸಂಯೋಜಿಸು; ಸಂಬಂಧ ಕಲ್ಪಿಸು.
  3. (ಯಾವುದೇ ವಿಷಯದಲ್ಲಿ) ಪಾಲುದಾರನಾಗು; ಭಾಗಿಯಾಗು; ಷಾಮೀಲಾಗು.
  4. ಒಮ್ಮತ ಸಾರು; ಸಮ್ಮತಿ ತಿಳಿಸು; ಅದೇ ಅಭಿಪ್ರಾಯ ಹೊಂದಿರುವುದಾಗಿ ಹೇಳು.
ಅಕರ್ಮಕ ಕ್ರಿಯಾಪದ
  1. (ಸಮಾನ ಧ್ಯೇಯಕ್ಕಾಗಿ) ಜತೆಗೂಡು; ಒಡುಗೂಡು; ಕಲೆ; ಸೇರು; ಬೆರೆ; ಸಹವಾಸ ಮಾಡು.
  2. ವ್ಯವಹರಿಸು; ವ್ಯವಹಾರ ಮಾಡು ಯಾ ಹೊಂದಿರು.
  3. (ರಸಾಯನವಿಜ್ಞಾನ) ಕೂಡು; ಸಂಯೋಜನೆಗೊಳ್ಳು; (ಅಣುಗಳ ವಿಷಯದಲ್ಲಿ) ಸಡಿಲವಾಗಿ ಸೇರಿಕೊ.