assimilate ಅಸಿಮಿಲೇಟ್‍
ಸಕರ್ಮಕ ಕ್ರಿಯಾಪದ
  1. ಸಮೀಕರಿಸು; ಸಮಾನರೂಪಗೊಳಿಸು; ಅನುರೂಪಗೊಳಿಸು; ಸದೃಶಗೊಳಿಸು; ಹೋಲುವಂತೆ ಮಾಡು: assimilate our law in this respect to the law of our neighbouring state ಈ ವಿಷಯದಲ್ಲಿ ನಮ್ಮ ಕಾನೂನನ್ನು ನಮ್ಮ ನೆರೆಯ ರಾಜ್ಯದ ಕಾನೂನಿಗೆ ಅನುರೂಪಗೊಳಿಸು.
  2. (ಧ್ವನಿವಿಜ್ಞಾನ) ಸಮೀಕರಿಸು; ಧ್ವನಿಯನ್ನು ಅದೇ ಪದದಲ್ಲಿರುವ ಯಾ ಪಕ್ಕದ ಪದದಲ್ಲಿರುವ ಧ್ವನಿಯನ್ನು ಹೋಲುವಂತೆ ಮಾಡು.
  3. ಅರಗಿಸಿಕೊ; ಮೈಗೂಡಿಸಿಕೊ; ಜೀರ್ಣಿಸಿಕೊ (ರೂಪಕವಾಗಿ ಸಹ).
  4. (ವಿರಳ ಪ್ರಯೋಗ) ಹೋಲಿಸು ಯಾ ಒಂದೇ ವರ್ಗಕ್ಕೆ ಸೇರಿಸು: assimilated the gains of a conquerer to that of a simple robber ಗೆದ್ದು ಪಡೆದದ್ದನ್ನು ಸಾಮಾನ್ಯ ದರೋಡೆಕಾರನದಕ್ಕೆ ಹೋಲಿಸಲಾಯಿತು.
ಅಕರ್ಮಕ ಕ್ರಿಯಾಪದ
  1. ಮೈಗೂಡು; ಜೀರ್ಣವಾಗು; ಅರಗು; ರಕ್ತಗತವಾಗು; ದೇಹಗತವಾಗು: some foods assimilate more readily than others ಕೆಲವು ಆಹಾರಗಳು ಮಿಕ್ಕವಕ್ಕಿಂತ ಹೆಚ್ಚು ಸುಲಭವಾಗಿ ಮೈಗೂಡುತ್ತವೆ.
  2. ಹೊಂದಿಕೊ; ಮಿಳಿತವಾಗು; ಅಂತರ್ಗತವಾಗು: cannot assimilate with the Church of England ಇಂಗ್ಲಂಡಿನ ಚರ್ಚಿನೊಂದಿಗೆ ಮಿಳಿತವಾಗಲು ಸಾಧ್ಯವಿಲ್ಲ.
  3. ಹೋಲು; -ಅಂತೆ -ಆಗು, ಇರು: assimilates with the character of English scenery ಇಂಗ್ಲಂಡಿನ ಪ್ರಕೃತಿದೃಶ್ಯವನ್ನು ಹೋಲುತ್ತದೆ.
  4. (ಧ್ವನಿವಿಜ್ಞಾನ) ಸಮೀಕೃತವಾಗು; ಅದೇ ಪದದ ಯಾ ಪಕ್ಕದ ಪದದ ಧ್ವನಿಯನ್ನು ಹೋಲು ಯಾ ಅದರಂತಾಗು: the sound ‘m’ often assimilates before a following ‘n’ ಅನೇಕ ಸಲ ‘ಮ್‍’ ಧ್ವನಿಯು ಅದಕ್ಕೆ ಪರವಾಗುವ ‘ನ್‍’ ಧ್ವನಿಯೊಂದಿಗೆ ಸಮೀಕೃತವಾಗುತ್ತದೆ, ನ್‍ ಆಗುತ್ತದೆ.