assignation ಆಸಿಗ್ನೇಷನ್‍
ನಾಮವಾಚಕ
  1. ಹಂಚಿಕೆ; ಪಾಲು ನಿರ್ಧಾರ.
  2. ವಿಧಿಪೂರ್ವಕ, ಕಾನೂನು ಬದ್ಧವಾದ – ವರ್ಗಾವಣೆ, ಹಸ್ತಾಂತರ.
  3. (ಕಾಲ ಮತ್ತು ಸ್ಥಳದ) ನೇಮಕ; ನಿರ್ಧಾರ; ನಿರ್ದೇಶ ಪಡಿಸುವಿಕೆ; ಗೊತ್ತುಪಡಿಸುವಿಕೆ; ನಿಗದಿಗೊಳಿಸುವಿಕೆ.
  4. ಕರ್ತೃ ಯಾ ಕಾಲದ ನಿರ್ದೇಶ.
  5. ಮೂಲ ನಿರ್ದೇಶ; ಕಾರಣ ನಿರ್ದೇಶ; ಯಾವುದೋ ಒಂದು ಇಂಥ ಮೂಲದ್ದೆಂದು, ಕಾರಣದ್ದೆಂದು ಸೂಚಿಸುವುದು.
  6. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗುಪ್ತ ಪ್ರಣಯದ ಏರ್ಪಾಟು; ಅಕ್ರಮ ಸಂಭೋಗಕ್ಕೆ ಕಾಲ ಸ್ಥಳಗಳನ್ನು ಗೊತ್ತು ಮಾಡುವುದು.
  7. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಗುಪ್ತಪ್ರಣಯಕ್ಕೆ, ಅಕ್ರಮ ಸಂಭೋಗಕ್ಕೆ ಮಾಡಿಕೊಂಡ ಗೊತ್ತುಪಾಡು.