assembly ಅಸೆಂಬ್ಲಿ
ನಾಮವಾಚಕ
  1. (ಸಾಮಾನ್ಯವಾಗಿ ಒಂದು ವಿಷಯದ ಚರ್ಚೆ, ಶಾಸನ ನಿರ್ಮಾಣ, ಪೂಜೆ, ವಿನೋದ, ಮೊದಲಾದವುಗಳಿಗೆ ಸೇರುವ) ಕೂಟ; ಸಭೆ; ಗುಂಪು; ನೆರವಿ; ಸಮೂಹ.
  2. ಶಾಸನ ಸಭೆ; ಕಾಯಿದೆ ಸಭೆ.
  3. ಒಟ್ಟಾಗಿ ಸೇರುವಿಕೆ; ಗುಂಪುಗೂಡುವಿಕೆ; ಸಭೆ ಸೇರುವಿಕೆ.
  4. ಸೇನೆ ಕರೆ; ಸನ್ನಾಹ ಕರೆ; ನಗಾರಿ, ಕಹಳೆ, ಮೊದಲಾದವುಗಳ ಶಬ್ದದಿಂದ ಸೈನಿಕರನ್ನು ಕರೆದು ಸೇರಿಸುವುದು; ಸೈನ್ಯದ ಅಂಗಗಳನ್ನು ಒಂದು ಸ್ಥಳದಲ್ಲಿ ಕೂಡುವಂತೆ ಮಾಡುವುದು.
  5. (ಒಂದು ಯಂತ್ರ ಯಾ ಬಿಡಿಭಾಗಗಳ) ಜೋಡಣೆ; ಸಂಯೋಜನೆ.