See also 2assay
1assay ಅಸೇ
ನಾಮವಾಚಕ
  1. (ಅದಿರು ಮೊದಲಾದವುಗಳ) ಗುಣ ಪರೀಕ್ಷೆ.
  2. ಲೋಹಪರೀಕ್ಷೆ; ಮುಖ್ಯವಾಗಿ ಲೋಹದ ಗಟ್ಟಿಯ, ಅದುರಿನ ಯಾ ನಾಣ್ಯದ ಚೊಕ್ಕತನವನ್ನು ಕಂಡು ಹಿಡಿಯುವುದು.
  3. ಪರೀಕ್ಷಣೀಯ ವಸ್ತು.
  4. ಅವುಗಳ ಪರೀಕ್ಷಾಫಲ.
  5. (ಪ್ರಾಚೀನ ಪ್ರಯೋಗ) ಪ್ರಯತ್ನ.
  6. (ರಸಾಯನವಿಜ್ಞಾನ ಮೊದಲಾದವು) ವಿಶ್ಲೇಷಣೆ; ಒಂದು ವಸ್ತುವಿನಲ್ಲಿ ಅಡಗಿರುವ ಅಂಶಗಳನ್ನು ನಿರ್ಧರಿಸುವುದು.
ಪದಗುಚ್ಛ

Assay Office ಚೊಕ್ಕಮುದ್ರೆ ಕಚೇರಿ; ಗುಣಪರೀಕ್ಷೆ ಕಚೇರಿ; (ಪ್ರಶಸ್ತ ಲೋಹಗಳ) ಚೊಕ್ಕತನವನ್ನು ಪರೀಕ್ಷೆ ಮಾಡುವ ಕಚೇರಿ.

See also 1assay
2assay ಅಸೇ
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ತೊಡಗು; ಯತ್ನಿಸು; ಪ್ರಯತ್ನಿಸು.
  2. (ಲೋಹಗಳ ಅದಿರಿನ) ಗುಣಪರೀಕ್ಷೆ ಮಾಡು.
  3. (ರಸಾಯನವಿಜ್ಞಾನ ಮೊದಲಾದವು) ವಿಶ್ಲೇಷಣೆ ಮಾಡು; ಒಂದು ವಸ್ತುವಿನಲ್ಲಿ ಅಡಗಿರುವ ಅಂಶಗಳನ್ನು ನಿರ್ಧರಿಸು.
ಅಕರ್ಮಕ ಕ್ರಿಯಾಪದ

ಗುಣ, ಪ್ರಮಾಣ, –ತೋರು: the ore assays high in silver ಆ ಅದಿರು ಬೆಳ್ಳಿಯ ಪ್ರಮಾಣ ಹೆಚ್ಚಾಗಿರುವುದನ್ನು ತೋರಿಸುತ್ತದೆ.