See also 2asleep
1asleep ಅಸ್ಲೀಪ್‍
ಆಖ್ಯಾತಕ ಗುಣವಾಚಕ
  1. ನಿದ್ರಿಸಿರುವ; ನಿದ್ರಿತ; ನಿದ್ದೆಯಲ್ಲಿರುವ; ಸುಪ್ತ: he has been asleep since noon ಮಧ್ಯಾಹ್ನದಿಂದ ಆತ ನಿದ್ದೆಯಲ್ಲಿದ್ದಾನೆ.
  2. (ರೂಪಕವಾಗಿ) ಸತ್ತ; ದೀರ್ಘ ನಿದ್ದೆಯ.
  3. (ಯಾವುದಾದರೂ ಅಂಗ) ಮರಗಟ್ಟಿದ; ಜಡಗಟ್ಟಿದ; ಜೊಮ್ಮು ಹಿಡಿದ; ಜೋವುಗಟ್ಟಿದ: my arm is asleep ನನ್ನ ತೋಳಿಗೆ ಜೋವು ಹಿಡಿದಿದೆ.
  4. (ರೂಪಕವಾಗಿ) ನಿದ್ರಿಸಿರುವ; ಜಡ; ನಿಶ್ಚೇಷ್ಟವಾಗಿರುವ: a government usually asleep ಸಾಮಾನ್ಯವಾಗಿ ಜಡವಾಗಿರುವ ಸರ್ಕಾರ.
  5. (ಬುಗುರಿಯ ವಿಷಯದಲ್ಲಿ) ಚಲನೆ ಕಾಣಿಸದಷ್ಟು ವೇಗವಾಗಿ ತಿರುಗುತ್ತಿರುವ, ಸುತ್ತುತ್ತಿರುವ.
ನುಡಿಗಟ್ಟು

asleep at the switch (ಕರ್ತವ್ಯದ ಯಾ ಸದವಕಾಶದ) ಎಚ್ಚರವಿಲ್ಲದ; ಅರಿವಿಲ್ಲದ.

See also 1asleep
2asleep ಅಸ್ಲೀಪ್‍
ಕ್ರಿಯಾವಿಶೇಷಣ
  1. ನಿದ್ದೆ ಹೋಗುತ್ತಾ: he fell asleep at noon ನಡುಹಗಲಲ್ಲೆ ಆತ ನಿದ್ದೆ ಹೋದ.
  2. (ರೂಪಕವಾಗಿ) ಸತ್ತು; ದೀರ್ಘ ನಿದ್ದೆಯಲ್ಲಿ.
  3. ಮರಗಟ್ಟಿ; ಜೋವು ಹಿಡಿದು.
  4. ಜಡವಾಗಿ; ನಿಶ್ಚೇಷ್ಟವಾಗಿ: the falling asleep of critical faculty ವಿವೇಚನೆ ನಿಶ್ಚೇಷ್ಟವಾಗಿರುವಿಕೆ.
  5. (ಬುಗುರಿ) ಚಲನೆ ಕಾಣದಷ್ಟು ವೇಗವಾಗಿ ಸುತ್ತುತ್ತ, ತಿರುಗುತ್ತ.