ask ಆಸ್ಕ್‍
ಸಕರ್ಮಕ ಕ್ರಿಯಾಪದ
  1. ಕೇಳು; ಪ್ರಶ್ನಿಸು; ಬೆಸಗೊಳ್ಳು; ವಿಚಾರಿಸು: ask (him) a question (ಅವನನ್ನು) ಒಂದು ಪ್ರಶ್ನೆ ಕೇಳು. ask (him) his name ಅವನ ಹೆಸರನ್ನು ಕೇಳು.
  2. (ಇನ್ನೊಬ್ಬನಿಂದ) ಕೋರು; ಕೇಳಿಕೊ; ಬೇಡು: ask a favour of him ಅವನ ಸಹಾಯ ಕೋರು.
  3. ಕೇಳು: ಬೇಕೆನಿಸು; ಅವಶ್ಯವೆನಿಸು: this experiments patience ಈ ಪ್ರಯೋಗಕ್ಕೆ ತಾಳ್ಮೆ ಬೇಕು.
  4. ಬೆಲೆ ಹೇಳು; ಬೆಲೆ ಕೋರು: he asked Rs. 10,000/- for the car ಅವನು ಆ ಕಾರಿಗೆ ಹತ್ತು ಸಾವಿರ (ಬೆಲೆ) ಕೇಳಿದ.
  5. (ಔತಣ ಮೊದಲಾದವುಗಳಗೆ ವ್ಯಕ್ತಿಯನ್ನು) ಕರೆ; ಬರಹೇಳು; ಆಮಂತ್ರಿಸು: we asked him to lunch ಆತನನ್ನು ಮಧ್ಯಾಹ್ನದ ಊಟಕ್ಕೆ ಕರೆದೆವು.
ಅಕರ್ಮಕ ಕ್ರಿಯಾಪದ
  1. (ಪಡೆಯಲು) ಕೇಳು; ಕೋರು: ask for it ಅದು ಬೇಕೆಂದು ಕೇಳು.
  2. (ಯೋಗಕ್ಷೇಮ ಮೊದಲಾದವನ್ನು) ಕೇಳು; ವಿಚಾರಿಸು: he asked for you ಅವನು ನಿನ್ನನ್ನು ವಿಚಾರಿಸಿದ.
ಪದಗುಚ್ಛ
  1. ask for
    1. (ವಸ್ತುವನ್ನು) ಕೇಳು; ಕೋರು: ask him for the book ಅವನನ್ನು ಪುಸ್ತಕ ಕೊಡು ಎಂದು ಕೇಳು.
    2. (ವ್ಯಕ್ತಿಯನ್ನು) ಕೇಳು; ಕೇಳಿಕೊಂಡು, ಹುಡುಕಿಕೊಂಡು – ಬರು: someone is asking for you ಯಾರೋ ನಿನ್ನನ್ನು ಕೇಳುತ್ತಿದ್ದಾರೆ.
    3. (ದಾರಿ, ಮಾರ್ಗ, ಮೊದಲಾದವನ್ನು) ಕೇಳು.
  2. asking price ಮಾರಾಟದ ಬೆಲೆ; ಕೊಳ್ಳುವ ಬೆಲೆ; ಮಾರಾಟಗಾರ ನಿರ್ಧರಿಸಿದ ಬೆಲೆ.
  3. ask the banns ಮದುವೆಗೆ ವಿರೋಧವಿದೆಯೇ ಎಂದು ಕೇಳು; ಮದುವೆಗೆ ಸಮ್ಮತಿ ಕೇಳು.
  4. for the (mere) asking ಕೇಳಿದಷ್ಟಕ್ಕೆ; ಸುಮ್ಮನೆ ಕೇಳಿದರೆ ಸಾಕು; (ಸುಮ್ಮನೆ) ಕೇಳಿದ್ದಕ್ಕೆ.
  5. I ask you (ಜುಗುಪ್ಸೆ ಮೊದಲಾದವುಗಳ ಉದ್ಗಾರ) ನೀನೇ ಹೇಳು.
  6. if you ask me (ಆಡುಮಾತು) ನನ್ನ ಅಭಿಪ್ರಾಯದಲ್ಲಿ; ನನ್ನನ್ನು ಕೇಳಿದರೆ.
ನುಡಿಗಟ್ಟು
  1. ask for it = ask for $^2$trouble.
  2. ask me another (ಆಡುಮಾತು) ನನಗೆ ಗೊತ್ತಿಲ್ಲ; ಇದನ್ನು ಬಿಟ್ಟು ಇನ್ನೇನಾದರೂ ಕೇಳು.