See also 2aside
1aside ಅಸೈಡ್‍
ಕ್ರಿಯಾವಿಶೇಷಣ
  1. ಪಕ್ಕಕ್ಕೆ; ಪಕ್ಕದಲ್ಲಿ; ಬದಿಗೆ; ಬದಿಯಲ್ಲಿ; ಮಗ್ಗುಲಿಗೆ; ಪಾರ್ಶಕ್ಕೆ: draw aside the curtain ತೆರೆಯನ್ನು ಪಕ್ಕಕ್ಕೆ ಎಳೆ, ಸರಿಸು.
  2. ಅಲಾಯಿದ; ಬೇರೆಯಾಗಿ; ಪ್ರತ್ಯೇಕವಾಗಿ.
  3. ಬದಿಗೊತ್ತಿ; ಒತ್ತಟ್ಟಿಗಿಟ್ಟು.
ನುಡಿಗಟ್ಟು
  1. aside from (ಅಮೆರಿಕನ್‍ ಪ್ರಯೋಗ) ಅದೂ ಅಲ್ಲದೆ.
  2. set aside (ನ್ಯಾಯಶಾಸ್ತ್ರ) (ತೀರ್ಪನ್ನು)
    1. ತಳ್ಳಿಹಾಕು; ರದ್ದುಮಾಡು.
    2. ಮೀಸಲಿಡು; ಮುಂದೆ ಉಪಯೋಗಿಸಲು – ತೆಗೆದಿಡು, ಎತ್ತಿಡು.
  3. speak aside ಬೇರೆ, ಗುಟ್ಟಾಗಿ, ಏಕಾಂತವಾಗಿ, ರಹಸ್ಯವಾಗಿ – ಮಾತನಾಡು.
  4. take aside ಏಕಾಂತವಾಗಿ ಮಾತನಾಡಲು ವ್ಯಕ್ತಿಯನ್ನು ಒಂದು ಪಕ್ಕಕ್ಕೆ ಕರೆದುಕೊಂಡು ಹೋಗು.
See also 1aside
2aside ಅಸೈಡ್‍
ನಾಮವಾಚಕ
  1. ಕಿವಿಮಾತು; ಪಿಸುಮಾತು; ಏಕಾಂತ; ಹತ್ತಿರ ಇರುವವರಿಗೆ ಕೇಳಿಸದಿರಲೆಂದು ಆಡಿದ ಮಾತು.
  2. (ನಾಟಕದಲ್ಲಿ) ಸ್ವಗತ; ಆತ್ಮಗತ; ಅಪವಾರಿತ; ಜನಾಂತಿಕ; ಸಭಾಸದರಿಗೆ ಕೇಳಿಸುವಂತೆ, ಮಿಕ್ಕ ಪಾತ್ರಗಳಿಗೆ ಕೇಳಿಸದಂತೆ ಪಾತ್ರಗಳು ಆಡುವ ಮಾತು.
  3. (ಲೇಖಕ ಮೊದಲಾದವರ) ಅಡ್ಡಮಾತು; ಹೊರಮಾತು; ಪ್ರಾಸಂಗಿಕ ಮಾತು; ಮುಖ್ಯ ವಿಷಯಕ್ಕೆ ಸಂಬಂಧಪಡದ ಮಾತು.