See also 2ash  3ash
1ash ಆಷ್‍
ನಾಮವಾಚಕ
  1. ಆಷ್‍ ಮರ; ಬೂದಿಮರ; ಮೇನಾಗಿಡ; ಹ್ರಾಕ್ಸಿನಸ್‍ ಕುಲದ, ಬೂದುತೊಗಟೆಯ, ಪಿಂಛಾಕಾರದ ಎಲೆಗಳುಳ್ಳ, ಒಂದು ಬಗೆಯ ಮರ.
  2. ಈ ಮರದ ನಾಟ, ಮೋಪು.
See also 1ash  3ash
2ash ಆಷ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಬೂದಿ; ಭಸ್ಮ.
  2. (ಸುಟ್ಟ ಸಾವಯವ ವಸ್ತುಗಳ) ಖನಿಜ ಶೇಷ; ಧೂಳು.
  3. (ಬಹುವಚನದಲ್ಲಿ) ಹೆಣದ ಬೂದಿ.
  4. (ಬವ ದಲ್ಲಿ) (ರೂಪಕವಾಗಿ) (ಮಾನವ ಯಾ ಅವನ ಶರೀರ ಮರ್ತ್ಯ ಎಂಬರ್ಥದಲ್ಲಿ) ಬೂದಿ: we are ashes and dust ನಾವೆಲ್ಲ ಕೇವಲ ಬೂದಿ ಮತ್ತು ಮಣ್ಣು.
  5. (ಬವ ದಲ್ಲಿ) ಹೆಣಬಿಳಿಚು; ಸತ್ತಂತೆ ತೋರುವ ವೈವರ್ಣ್ಯ, ಬಿಳಿಚು.
  6. ಬೂದುಬಣ್ಣ.
  7. (ಬ್ರಿಟಿಷ್‍ ಪ್ರಯೋಗ) (Ashes) ಆಸ್ಟ್ರೇಲಿಯ ಮತ್ತು ಇಂಗ್ಲಂಡ್‍ಗಳ ನಡುವಣ ಕ್ರಿಕೆಟ್‍ ಟೆಸ್ಟ್‍ ಪಂದ್ಯಗಳ ಸರಣಿಯಲ್ಲಿ ಗೆಲ್ಲುವವರಿಗೆ ಕೊಡುವ ಸಾಂಕೇತಿಕ ಟ್ರೋಹಿ.
  8. ಅಗ್ನಿಪರ್ವತದಿಂದ ಚಿಮ್ಮಿದ ಬೂದಿಯಂಥ ವಸ್ತು; ಜ್ವಾಲಾಮುಖಿಯ ಬೂದಿ.
ನುಡಿಗಟ್ಟು
  1. bring back the Ashes ಆಸ್ಟ್ರೇಲಿಯ ಮತ್ತು ಇಂಗ್ಲಂಡ್‍ಗಳ ನಡುವಣ ಕ್ರಿಕೆಟ್‍ ಟೆಸ್ಟ್‍ ಪಂದ್ಯಗಳ ಸರಣಿಯಲ್ಲಿ ಸೋಲನ್ನು ಅಳಿಸಿಹಾಕು; ಪುನಃ ಗೆದ್ದುಕೊಂಡು ಬರು.
  2. lay in ashes ಬುಡಮಟ್ಟ ಸುಟ್ಟು ನಾಶವಾಗು; (ಪೂರ್ತಿ) ಸುಟ್ಟು ಬೂದಿಯಾಗು.
  3. sackcloth and ashes.
See also 1ash  2ash
3ash ಆಷ್‍
ಸಕರ್ಮಕ ಕ್ರಿಯಾಪದ
  1. ಬೂದಿ – ಚಿಮುಕಿಸು, ಸಿಂಪಡಿಸು.
  2. ಬೂದಿ ಮಾಡು; ಬೂದಿಯಾಗಿಸು: the bones were ashed in a furnace ಕುಲುಮೆಯಲ್ಲಿ ಮೂಳೆಗಳನ್ನು ಬೂದಿ ಮಾಡಲಾಯಿತು.
  3. (ಕಾಚದ ಹಿಟ್ಟು ಮೊದಲಾದ ಉಜ್ಜುವ ವಸ್ತುವಿನಿಂದ) ಉಜ್ಜು; ಬೆಳಗು; ತಿಕ್ಕು; ಉಜ್ಜಿ ನುಣುಪು ಮಾಡು ಯಾ ಮೆರಗು ಕೊಡು.