ascend ಅಸೆಂಡ್‍
ಸಕರ್ಮಕ ಕ್ರಿಯಾಪದ
  1. (ಪ್ರವಾಹಕ್ಕೆ) ಇದಿರಾಗಿ ಹೋಗು; (ನದಿಯ) ಮೂಲದ ಕಡೆಗೆ ಹೋಗು: ascend a river ನದಿಯ ಪ್ರವಾಹಕ್ಕೆ ಎದುರಾಗಿ ಹೋಗು.
  2. ಆರೋಹಣ ಮಾಡು; ಉತ್ತರಾಧಿಕಾರಿಯಾಗು: ascended the throne ಸಿಂಹಾಸನವೇರಿದನು(ಳು); ರಾಜನಾದನು ಯಾ ರಾಣಿಯಾದಳು.
  3. (ಬೆಟ್ಟ, ಮೆಟ್ಟಲು, ಎತ್ತರದ ಜಾಗ) ಏರು; ಹತ್ತು; ಆರೋಹಿಸು.
ಅಕರ್ಮಕ ಕ್ರಿಯಾಪದ
  1. ಏರು; ಏರಿ ಹೋಗು; ಏರಿ ಬಾ; ಹತ್ತು; ಅಡರು; ಮೇಲಕ್ಕೆ ಹೋಗು.
  2. (ಪದಾರ್ಥಗಳ ವಿಷಯದಲ್ಲಿ) ಏರು.
  3. (ಚಿಂತನೆ, ಪದವಿ, ಗುಣಮಟ್ಟಗಳಲ್ಲಿ) ಏರು; ಏಳಿಗೆ ಹೊಂದು; ಊರ್ಜಿತಗೊಳ್ಳು; ಉತ್ತಮಗೊಳ್ಳು; ಅಭ್ಯುದಯಕ್ಕೆ ಬರು.
  4. (ದಿಗಂತದಿಂದ) ಮೇಲೇರು.
  5. ಚಡಾವಾಗಿರು; ಏರಾಗಿರು.
  6. (ಕಾಲದಲ್ಲಿ) ಮೂಲಕ್ಕೆ ಸರಿ; ಹಿಂದಕ್ಕೆ ಹೋಗು: inheritance may not lineally ascend ಆಸ್ತಿಯ ಉತ್ತರಾಧಿಕಾರವು ಹಿಂದಿನ ತಲೆಗೆ ಹೋಗಲಾರದು.
  7. (ಧ್ವನಿ) ಏರು; ತಾರಕ್ಕೇರು.
  8. (ಮುದ್ರಣ) (ಅಕ್ಷರದ ವಿಷಯದಲ್ಲಿ) ಸ್ವಲ್ಪಭಾಗ ಮೇಲೆ ಚಾಚಿರು.