artist ಆರ್ಟಿಸ್ಟ್‍
ನಾಮವಾಚಕ
  1. ಕಲಾವಿದ; ಕಲಾಕಾರ; ಮುಖ್ಯವಾಗಿ ವರ್ಣಚಿತ್ರಣಕಾರ.
  2. ಕಲಾಜೀವಿ; ವೃತ್ತಿಕಲಾವಿದ; ಲಲಿತಕಲೆಯೊಂದನ್ನು ವೃತ್ತಿಯಾಗುಳ್ಳವ (ಮುಖ್ಯವಾಗಿ ನಟ, ಸಂಗೀತಗಾರ, ನರ್ತಕ).
  3. ಕಲಾವಿದ; ಕುಶಲಿ; ಯಾವುದೇ ಕೆಲಸದಲ್ಲಿ ಕಲೆಗಾರಿಕೆ ತೋರುವವ; ಯಾವುದನ್ನೇ ಚೆನ್ನಾಗಿ, ಸುಂದರವಾಗಿ, ಪರಿಣಾಮಕಾರಿಯಾಗಿ ಮಾಡುವವ: an artist in words ಪದಕುಶಲಿ; ಶಬ್ದ ಚತುರ.
  4. (ಆಸ್ಟ್ರೇಲಿಯ, ನ್ಯೂಸೀಲಂಡ್‍) ಭಕ್ತ (ಸಾಮಾನ್ಯವಾಗಿ ವಿಶೇಷಣದೊಡನೆ): booze artist ಪಾನ ಭಕ್ತ.